ಶ್ರೇಯಸ್ ಐಯರ್ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಲು ಯಾರು ಸೂಕ್ತ?
ಶನಿವಾರ, 27 ಮಾರ್ಚ್ 2021 (09:02 IST)
ನವದೆಹಲಿ: ಭುಜಕ್ಕೆ ಗಂಭೀರ ಗಾಯಗೊಂಡು ಐಪಿಎಲ್ 14 ರಿಂದ ಹೊರಬಿದ್ದಿರುವ ಶ್ರೇಯಸ್ ಐಯರ್ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕರಾಗುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶ್ರೇಯರ್ ಸ್ಥಾನಕ್ಕೆ ನಾಯಕರಾಗಲು ಕೆಲವು ಆಟಗಾರರು ರೇಸ್ ನಲ್ಲಿದ್ದಾರೆ. ಅವರ ಪೈಕಿ ಮುಂಚೂಣಿಯಲ್ಲಿರುವುದು, ಸ್ಟೀವ್ ಸ್ಮಿತ್. ಅನುಭವಿ ಆಟಗಾರರಿಗೆ ಮಣೆ ಹಾಕುವುದಿದ್ದರೆ ಸ್ಟೀವ್ ಸ್ಮಿತ್, ಶಿಖರ್ ಧವನ್, ರವಿಚಂದ್ರನ್ ಅಶ್ವಿನ್ ಮುಂಚೂಣಿಯಲ್ಲಿದ್ದಾರೆ.
ಒಂದು ವೇಳೆ ಡೆಲ್ಲಿ ತಂಡ ಯುವ ನಾಯಕನನ್ನು ಆಯ್ಕೆ ಮಾಡುವುದಾದರೆ ರಿಷಬ್ ಪಂತ್ ಗೆ ಅವಕಾಶ ಸಿಗಬಹುದು. ಪಂತ್ ನಾಯಕನಾಗಿ ಮಿಂಚಿದರೆ ಮುಂದೊಂದು ದಿನ ಟೀಂ ಇಂಡಿಯಾದಲ್ಲೂ ಅವರ ಸ್ಥಾನ ಗಟ್ಟಿಯಾಗಬಹುದು.