ಆಟವಾಡದಿರುವಾಗ ಫ್ರಾಂಚೈಸಿ ಶುಲ್ಕ ಏಕೆ ನೀಡಬೇಕು: ಸಿಎಸ್‌ಕೆ, ಆರ್‌ಆರ್ ಕೋರ್ಟ್ ಮೆಟ್ಟಿಲು

ಗುರುವಾರ, 26 ಮೇ 2016 (17:00 IST)
ಐಪಿಎಲ್‌ನಿಂದ ಅಮಾನತಾದ ಫ್ರಾಂಚೈಸಿಗಳಾದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 2 ವರ್ಷಗಳ ಕಾಲ ಪಂದ್ಯಾವಳಿಯಿಂದ ಅಮಾನಾತಾಗಿದ್ದರೂ ಬಿಸಿಸಿಐಗೆ ಐಪಿಎಲ್ ಫ್ರಾಂಚೈಸಿ ಶುಲ್ಕ ನೀಡುವುದರ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿವೆ. ಐಪಿಎಲ್ ಚೌಕಟ್ಟಿನ ಭಾಗವಾಗಿ ಉಳಿಯಬೇಕಾದರೆ ಫ್ರಾಂಚೈಸಿ ಶುಲ್ಕಗಳ ಪಾವತಿ ಮುಂದುವರಿಸುವಂತೆ ಎರಡೂ ಫ್ರಾಂಚೈಸಿಗಳಿಗೆ ಬಿಸಿಸಿಐ ತಿಳಿಸಿತ್ತು. 

 ಸಿಎಸ್‌ಕೆ ಮತ್ತು ರಾಜಸ್ಥಾನ ಕ್ರಮವಾಗಿ 73 ಕೋಟಿ ಮತ್ತು 56 ಕೋಟಿ ರೂ.ಗಳನ್ನು 2 ವರ್ಷಗಳ ಕಾಲ  ಐಪಿಎಲ್ ಭಾಗವಾಗಿ ಉಳಿದಿರದಿದ್ದರೂ ಪಾವತಿ ಮಾಡುವಂತೆ ಬಿಸಿಸಿಐ ತಿಳಿಸಿತ್ತು. 
 
 ನಾವು ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ಗೆ ಹೋಗಿದ್ದು, ಫ್ರಾಂಚೈಸಿ ಶುಲ್ಕ ಪಾವತಿ ವಿವಾದವನ್ನು ಸಂಧಾನದ ಮೂಲಕ ಪರಿಹರಿಸುವಂತೆ ಕೋರಿದ್ದೇವೆ. ರಾಜಸ್ಥಾನ ರಾಯಲ್ಸ್ ಕೂಡ ಇದೇ ರೀತಿ ಮಾಡಿದೆ. ಮೌಖಿಕ ವಿಚಾರಣೆ ಮುಗಿದಿದ್ದರೂ ಕೆಲವು ತಾಂತ್ರಿಕತೆಗಳು ಉಳಿದಿದ್ದು, ತೀರ್ಪು ನೀಡಲು 2-3 ತಿಂಗಳು
 ತೆಗೆದುಕೊಳ್ಳಬಹುದು ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜರ್ ಜಾರ್ಜ್ ಜಾನ್ ತಿಳಿಸಿದರು. ನಮ್ಮ ತರ್ಕ ಸರಳವಾಗಿದೆ. ನಾವು  2 ವರ್ಷಗಳ ಕಾಲ ಆಟವನ್ನು ಆಡದಿರುವಾಗ ಫ್ರಾಂಚೈಸಿ ಶುಲ್ಕ ಯಾಕೆ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ