ಏಕದಿನ ವಿಶ್ವಕಪ್ ಕ್ರಿಕೆಟ್: ಮೊದಲ ಗೆಲುವಿನ ಸನಿಹ ಆಸ್ಟ್ರೇಲಿಯಾ

ಸೋಮವಾರ, 16 ಅಕ್ಟೋಬರ್ 2023 (20:38 IST)
ಲಕ್ನೋ: ಏಕದಿನ ವಿಶ್ವಕಪ್ ನಲ್ಲಿ ಪ್ರಬಲ ಆಸ್ಟ್ರೇಲಿಯಾ ಕೊನೆಗೂ ಮೊದಲ ಗೆಲುವಿನ ಸನಿಹದಲ್ಲಿದೆ. ಇಂದು ಶ್ರೀಲಂಕಾ ವಿರುದ್ಧ ಆಸೀಸ್ ಗೆಲ್ಲುವ ಎಲ್ಲಾ ಲಕ್ಷಣಗಳಿವೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 43.3 ಓವರ್ ಗಳಲ್ಲಿ 209 ರನ್ ಗಳಿಗೆ ಆಲೌಟ್ ಆಯಿತು. ಮೊದಲ ವಿಕೆಟ್ ಗೆ ಪಥುಮ್ ನಿಸಂಕಾ (61), ಕುಸಲ ಪೆರೇರಾ (78) ಜೋಟಿ ಮೊದಲ ವಿಕೆಟ್ ಗೆ 125 ರನ್ ಜೋಡಿಸಿತು. ಆದರೆ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಂಕಾ 209 ರನ್ ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಸ್ಪಿನ್ನರ್ ಆಡಂ ಝಂಪಾ 4, ಪ್ಯಾಟ್ ಕ್ಯುಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿರುವ ಆಸೀಸ್ ಇತ್ತೀಚೆಗಿನ ವರದಿ ಬಂದಾಗ 23 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. ಮಿಚೆಲ್ ಮಾರ್ಷ್ 52 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಡೇವಿಡ್ ವಾರ್ನರ್ 11, ಸ್ಟೀವ್ ಸ್ಮಿತ್ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇದೀಗ ಕ್ರೀಸ್ ನಲ್ಲಿ 30 ರನ್ ಗಳಿಸಿರುವ ಲಬುಶೇನ್ ಮತ್ತು ಜೋಶ್ ಇಂಗ್ಲಿಸ್ 26 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ