ಕೊಹ್ಲಿಯಿಂದ ಬಾಬರ್ ಜೆರ್ಸಿ ಪಡೆದಿದ್ದಕ್ಕೆ ವಾಸಿಂ ಅಕ್ರಂ ವ್ಯಂಗ್ಯ

ಭಾನುವಾರ, 15 ಅಕ್ಟೋಬರ್ 2023 (17:00 IST)
ಅಹಮ್ಮದಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯದ ನಡುವೆ ಪಾಕ್ ನಾಯಕ ಬಾಬರ್ ಅಜಮ್ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ಸಹಿ ಹಾಕಿದ ಜೆರ್ಸಿಯನ್ನು ಉಡುಗೊರೆಯಾಗಿ ಪಡೆದಿದ್ದರು.

ಕೊಹ್ಲಿ ಸಹಿ ಮಾಡಿದ ತಮ್ಮ ಜೆರ್ಸಿ ಉಡುಗೊರೆಯಾಗಿ ನೀಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದು ಪಾಕ್ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ.

ಅದೇ ರೀತಿ ಪಾಕ್ ಮಾಜಿ ವೇಗಿ ವಾಸಿಂ ಅಕ್ರಂ ಕೂಡಾ ಬಾಬರ್ ಅಜಮ್ ಅವರ ಈ ವರ್ತನೆಯನ್ನು ವ್ಯಂಗ್ಯ ಮಾಡಿದ್ದಾರೆ. ‘’ಬಾಬರ್ ಎಲ್ಲರೆದುರೇ ಜೆರ್ಸಿ ಕೇಳಿದ್ದು ನೋಡಿದೆ. ಒಂದು ವೇಳೆ ನಿಮ್ಮ ಮಾವನ ಮಗನಿಗೆ ಕೊಹ್ಲಿಯ ಜೆರ್ಸಿ ಉಡುಗೊರೆ ಕೊಡಬೇಕೆಂದಿದ್ದರೆ ಅದನ್ನು ಪ್ರೈವೇಟ್ ಆಗಿ ಕೇಳಬಹುದಿತ್ತು. ಎಲ್ಲರ ಎದುರು ಕೇಳುವ ಅಗತ್ಯವೇನಿದೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ