ಏಕದಿನ ವಿಶ್ವಕಪ್ ಕ್ರಿಕೆಟ್: ರೋಹಿತ್ ಕ್ಯಾಚ್ ಹಿಡಿಯಲು ಹೋಗಿ ಲಿವಿಂಗ್ ಸ್ಟೋನ್ ಔಟ್!
ರೋಹಿತ್ ನೀಡಿದ ಕ್ಯಾಚ್ ನ್ನು ಹಿಡಿಯುವ ಪ್ರಯತ್ನದಲ್ಲಿ ಲಿವಿಂಗ್ ಸ್ಟೋನ್ ಆಯತಪ್ಪಿ ಬಿದ್ದರು. ಹಾಗಿದ್ದರೂ ಅವರು ಕ್ಯಾಚ್ ಹಿಡಿಯುವಲ್ಲಿ ಸಫಲರಾದರು.
ಆದರೆ ಬಳಿಕ ಮೊಣಕಾಲಿನ ನೋವಿನಿಂದಾಗಿ ಮೈದಾನದಲ್ಲೇ ಕುಸಿದು ಕೂತ ಲಿವಿಂಗ್ ಸ್ಟೋನ್ ಗೆ ತಂಡದ ಫಿಸಿಯೋ ಶಶ್ರೂಷೆ ಮಾಡಿದ ಬಳಿಕ ಫೀಲ್ಡಿಂಗ್ ಮುಂದುವರಿಸಿದರು. ಮೇಲ್ನೋಟಕ್ಕೆ ಅವರ ಗಾಯ ಗಂಭೀರವಲ್ಲ ಎನಿಸುತ್ತಿದ್ದು, ಬ್ಯಾಟಿಂಗ್ ಗೆ ಮರಳುವ ನಿರೀಕ್ಷೆಯಿದೆ.