ಏಕದಿನ ವಿಶ್ವಕಪ್: ಅಧಿಕೃತವಾಗಿ ಸೆಮಿಫೈನಲ್ ಗೇರಿದ ಟೀಂ ಇಂಡಿಯಾ

ಗುರುವಾರ, 2 ನವೆಂಬರ್ 2023 (20:47 IST)
ಮುಂಬೈ: ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವನ್ನು ಭರ್ಜರಿಯಾಗಿ 302 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸೆಮಿಫೈನಲ್ ಗೇರಿದೆ.

ಈ ವಿಶ್ವಕಪ್ ಕೂಟದಲ್ಲಿ ಇದುವರೆಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ ಈಗ 14 ಅಂಕ ಸಂಪಾದಿಸಿದ್ದು ಅಗ್ರ ಸ್ಥಾನದಲ್ಲಿದೆ. ಜೊತೆಗೆ ನೆಟ್ ರನ್ ರೇಟ್ ಕೂಡಾ 2.102 ಕ್ಕೇರಿದೆ.

ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಗೇರಿದ ಮೊದಲ ತಂಡವೆನಿಸಿಕೊಂಡಿದೆ. ಲೀಗ್ ಹಂತದಲ್ಲಿ ಭಾರತ ಮುಂದಿನ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ಆಡಲಿದೆ. ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ