ಭಾರತ, ದಕ್ಷಿಣ ಆಫ್ರಿಕಾ ಮಹಿಳೆಯರ ವಿಶ್ವಕಪ್ ಪಂದ್ಯ ನಡೆಸಲು ಇಂದು ಇದರದ್ದೇ ಭಯ

Krishnaveni K

ಗುರುವಾರ, 9 ಅಕ್ಟೋಬರ್ 2025 (11:15 IST)
ವಿಶಾಖಪಟ್ಟಣ: ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಪಂದ್ಯ ನಡೆಯುವುದಕ್ಕೆ ಒಂದು ಅಡ್ಡಿ ಎದುರಾಗಿದೆ.

ವಿಶಾಖಪಟ್ಟಣಂನಲ್ಲಿ ಈ ಪಂದ್ಯ ನಡೆಯಲಿದೆ. ಹಗಲು ಹೊತ್ತು ವಿಶಾಖಪಟ್ಟಣಂನಲ್ಲಿ ಅತಿಯಾದ ಶಾಖವಿರಲಿದ್ದು, ಸಂಜೆ ವೇಳೆ ಮೋಡ ಕವಿದ ವಾತಾವರಣ ಮತ್ತು ಗುಡುಗು ಬರುವ ಸಾಧ್ಯತೆಯಿದೆ. ಹೀಗಾಗಿ ಮಳೆಯ ಆತಂಕವಿದೆ. ಮಳೆ ಬಾರದೇ ಇದ್ದರೆ ಪಂದ್ಯ ನಿರಾತಂಕವಾಗಿ ಸಾಗಲಿದೆ.

ಅಂಕ ಸುಧಾರಣೆಗೆ ಭಾರತಕ್ಕೆ ಇಂದಿನ ಪಂದ್ಯದ ಗೆಲುವು ಮಹತ್ವದ್ದಾಗಿದೆ. ಯಾಕೆಂದರೆ ಮುಂದೆ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಕಠಿಣ ಎದುರಾಳಿಗಳ ಜೊತೆ ಆಡಬೇಕಿದೆ. ಅತ್ತ ದಕ್ಷಿಣ ಆಫ್ರಿಕಾ ಈಗಾಗಲೇ 1 ಪಂದ್ಯ ಸೋತಿದ್ದು ಟಾಪ್ 4 ರಲ್ಲಿ ಸ್ಥಾನ ಪಡೆಯಲು ಇಂದು ಗೆಲ್ಲಲೇಬೇಕಾಗಿದೆ.

ವಿಶಾಖಪಟ್ಟಣಂನ ಪಿಚ್ ಗಮನಿಸಿದರೆ ಇಲ್ಲಿ ಈ ಬಾರಿ ಬ್ಯಾಟಿಂಗ್ ಗೆ ಅನುಕೂಲವಾಗುವ ಪಿಚ್ ತಯಾರಿಸಲಾಗಿದೆ. ಮಹಿಳೆಯರ ವಿಶ್ವಕಪ್ ನಲ್ಲಿ ಇದುವರೆಗೆ ನಡೆದ ಎಲ್ಲಾ ಪಂದ್ಯಗಳೂ ಲೋ ಸ್ಕೋರಿಂಗ್ ಪಂದ್ಯಗಳಾಗಿತ್ತು. ಇಂದಾದರೂ ಬ್ಯಾಟಿಂಗ್ ಧಮಾಕಾ ಕಾಣಬಹುದಾ ನೋಡಬೇಕಿದೆ. ಈ ಪಂದ್ಯ ಅಪರಾಹ್ನ 3 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ