ಏಕದಿನ ವಿಶ್ವಕಪ್ ಕ್ರಿಕೆಟ್: ಪಾಕಿಸ್ತಾನ-ಇಂಗ್ಲೆಂಡ್ ನಡುವೆ ಗೆಲ್ಲುವವರು ಯಾರು?

ಶನಿವಾರ, 11 ನವೆಂಬರ್ 2023 (08:50 IST)
ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇಂದು ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.

ಈ ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್ ರೇಸ್ ನಿಂದ ಬಹುತೇಕ ಹೊರಬಿದ್ದಿವೆ. ಹೀಗಾಗಿ ಈ ವಿಶ್ವಕಪ್ ಕೂಟದಲ್ಲಿ ಈ ಎರಡೂ ತಂಡಕ್ಕೆ ಇದೇ ಕೊನೆಯ ಪಂದ್ಯವಾಗಲಿದೆ.

ಇಂಗ್ಲೆಂಡ್ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಾ ಬಂದಿತ್ತು. ಆದರೆ ಕಳೆದ ಪಂದ್ಯದಲ್ಲಿ ಮಾತ್ರ ಖ‍್ಯಾತಿಗೆ ತಕ್ಕ ಆಟವಾಡಿತ್ತು. ಆದರೆ ಅಷ್ಟರಲ್ಲೇ ಕಾಲ ಮಿಂಚಿದೆ. ಇನ್ನೊಂದೆಡೆ 8 ಪಂದ್ಯಗಳಿಂದ 4 ಗೆಲುವು ಸಂಪಾದಿಸಿರುವ ಪಾಕಿಸ್ತಾನ ಇಂದು ಭಾರೀ ರನ್ ರೇಟ್ ಅಂತರದ ಗೆಲುವು ಸಾಧಿಸಿದರೆ ಮಾತ್ರ ಸೆಮಿಫೈನಲ್ ಕನಸು ಕಾಣಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ‍್ಯ. ಹೀಗಾಗಿ ಈ ತಂಡಕ್ಕೂ ಇದೇ ಕೊನೆಯ ಪಂದ್ಯವಾಗುವ ಸಾಧ‍್ಯತೆಯೇ ಹೆಚ್ಚು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ