ಬಿಸಿಸಿಐ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯಾ ಆಯ್ಕೆ

ಸೋಮವಾರ, 2 ಮಾರ್ಚ್ 2015 (11:48 IST)
ಜಗಮೋಹನ್ ದಾಲ್ಮಿಯಾ ಅವರು ಎರಡನೇ ಅವಧಿಗೆ ಸೋಮವಾರ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚುನಾವಣೆ ಫಲಿತಾಂಶವನ್ನು ಪ್ರಕಟಿಸಿ ದಾಲ್ಮಿಯಾ ನೇಮಕವನ್ನು ಘೋಷಿಸಲಾಯಿತು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ತನಿಖೆ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷಹುದ್ದೆಗೆ ಸ್ಪರ್ಧಿಸಿರಲಿಲ್ಲ. 
 
ದಾಲ್ಮಿಯಾ ಅಧ್ಯಕ್ಷಗಿರಿಯನ್ನು ಚೆನ್ನೈನಲ್ಲಿ ಸೋಮವಾರ ನಡೆಯುವ ಬಿಸಿಸಿಐ ಸಭೆಯಲ್ಲಿ ಅನುಮೋದಿಸಲಾಗುತ್ತದೆ. ಶನಿವಾರ ರಾತ್ರಿವರೆಗೆ ಬಿಜೆಪಿ ಸಂಸದ ಮತ್ತು ಮಂಡಳಿಯ ಜಂಟಿ ಕಾರ್ಯದರ್ಶಿ ಅನುರಾಗ್ ಠಾಕುರ್ ಹೆಸರು ಕೇಳಿಬಂದಿತ್ತು. ಶರದ್ ಪವಾರ್ ಹೆಸರು ಕೂಡ ಹರಿದಾಡುತ್ತಿತ್ತು.

ಆದರೆ ದಾಲ್ಮಿಯಾ ಅವರಿಗೆ ಪೂರ್ವ ವಲಯದ ಸದಸ್ಯರ ಬೆಂಬಲವಿದ್ದಿದ್ದರಿಂದ ಅವರು ಬಿಸಿಸಿಐ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ.ಇನ್ನೂ 3 ತಿಂಗಳಲ್ಲಿ 75 ವರ್ಷ ವಯಸ್ಸಿಗೆ ಮುಟ್ಟಲಿರುವ ದಾಲ್ಮಿಯಾ ಬಂಗಾಳ ಕ್ರಿಕೆಟ್ ಸಂಸ್ಥೆ ಮತ್ತು ನ್ಯಾಷನಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರೂ ಕೂಡ ಆಗಿದ್ದಾರೆ. ಸಂಜಯ್ ಪಟೇಲ್ ಅವರು ಕಾರ್ಯದರ್ಶಿಯಾದರೆ, ಅನಿರುದ್ಧ ಚೌಧರಿ ಮಂಡಳಿಯ ಹೊಸ ಕೋಶಾಧಿಕಾರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ