ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ವೆಟ್ಟೋರಿ

ಮಂಗಳವಾರ, 31 ಮಾರ್ಚ್ 2015 (11:56 IST)
ಐಸಿಸಿ ವಿಶ್ವಕಪ್ 2015ರಲ್ಲಿ ತಮ್ಮ ತಂಡ ರನ್ನರ್ಸ್ ಅಪ್ ಆದ ಬಳಿಕ ಕಿವೀ ತಂಡದ ಪ್ರಸಿದ್ಧ ಆಟಗಾರ ಡೇನಿಯಲ್ ವೆಟ್ಟೋರಿ ಅಂತಾರಾಷ್ಟ್ರೀಯ ಕ್ರಿಕೆಟ್‌‍ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 
 
ತಮ್ಮ ತಂಡದ ಆಟಗಾರರೊಂದಿಗೆ ಆಕ್ಲೆಂಡ್ ವಿಮಾನನಿಲ್ದಾಣದಲ್ಲಿ ವೆಟ್ಟೋರಿ ಬಂದಿಳಿದ ಕೂಡಲೇ ಸುಮಾರು 500 ಬೆಂಬಲಿಗರ ನಡುವೆ ತಮ್ಮ ನಿವೃತ್ತಿಯನ್ನು ಪ್ರಕಟಿಸುತ್ತಾ ಕ್ರಿಕೆಟ್ ವಿಶ್ವಕಪ್ ಫೈನಲ್ ತಮ್ಮ ಕಡೆಯ ಪಂದ್ಯ ಎಂದು ಘೋಷಿಸಿದರು.  ವೆಟ್ಟೋರಿ ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ 113 ಟೆಸ್ಟ್ ಪಂದ್ಯಗಳನ್ನು ಮತ್ತು 295 ಏಕದಿನ ಪಂದ್ಯಗಳನ್ನು ಆಡಿದ್ದಾರೆ.  ಐಸಿಸಿ ಕೂಡ ವೆಟ್ಟೋರಿ ನಿವೃತ್ತಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದೆ. 
 
ನ್ಯೂಜಿಲೆಂಡ್ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಆಸೀಸ್‌ಗೆ ಸೋತರೂ ರನ್ಸರ್ಸ್ ಅಪ್ ಪ್ರಶಸ್ತಿಗೆ ಪಾತ್ರರಾದ ವಿಶ್ವಕಪ್ ಹೀರೋಗಳ ಸ್ವಾಗತಕ್ಕೆ ಕಿವೀಸ್ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನು ನ್ಯೂಜಿಲೆಂಡ್ ಸೂರೆಗೊಂಡಿತ್ತು. ನ್ಯೂಜಿಲೆಂಡ್ ಕ್ರಿಕೆಟಿಗರ ಕ್ರೀಡಾ ಮನೋಭಾವವನ್ನು ಮತ್ತು ಗುಣಮಟ್ಟದ ಆಟವನ್ನು ಅಭಿಮಾನಿಗಳು ಶ್ಲಾಘಿಸಿದ್ದರು. ಫೈನಲ್ ಪಂದ್ಯದವರೆಗೆ ಅಜೇಯರಾಗಿ ಉಳಿದಿದ್ದ ನ್ಯೂಜಿಲೆಂಡ್ ಆಸೀಸ್ ವಿರುದ್ಧ ಫೈನಲ್ಸ್‌ನಲ್ಲಿ ಸೋಲಪ್ಪಿತು. 

ವೆಬ್ದುನಿಯಾವನ್ನು ಓದಿ