ಟಿ20 ವಿಶ್ವಕಪ್ ಗೆಲ್ಲಲು ಯಾವುದೇ ತಂಡಕ್ಕೂ ಟೀಂ ಇಂಡಿಯಾ ಸೋಲಿಸಲೇಬೇಕು!
ಭಾರತ ಎಲ್ಲಾ ತಂಡಗಳಿಗೂ ಕಠಿಣ ಎದುರಾಳಿಯಾಗಲಿದೆ. ಅಲ್ಲಿನ ಆಟಗಾರರು ದೇಶೀಯ ಟಿ20 ಕ್ರಿಕೆಟ್, ಐಪಿಎಲ್ ಕ್ರಿಕೆಟ್ ನಿಂದ ಸಿಗುವ ಅನುಭವದಿಂದ ಸಾಕಷ್ಟು ತಯಾರಿ ನಡೆಸಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬರುತ್ತಾರೆ. ಸೆಮಿಫೈನಲ್ ಇರಲಿ, ಫೈನಲ್ ಇರಲಿ ಭಾರತವನ್ನು ಸೋಲಿಸಿದರಷ್ಟೇ ಟಿ20 ಟೂರ್ನಮೆಂಟ್ ಗೆಲ್ಲಬಹುದು ಎಂದು 2016 ರಲ್ಲೇ ನಮಗೆ ನಮ್ಮ ಕೋಚ್ ಹೇಳಿದ್ದರು. ಅದು ನಿಜ ಕೂಡಾ ಎಂದು ಸಾಮಿ ಅಭಿಪ್ರಾಯಪಟ್ಟಿದ್ದಾರೆ.