2016ರ ವಿಶ್ವ ಟಿ20 ಪ್ರಶಸ್ತಿಯ ಮೇಲೆ ಕಣ್ಣಿರಿಸಿದ ಆಸ್ಟ್ರೇಲಿಯಾ

ಸೋಮವಾರ, 31 ಆಗಸ್ಟ್ 2015 (14:40 IST)
ಮುಂದಿನ ವರ್ಷ ವಿಶ್ವ ಟ್ವೆಂಟಿ 20 ಪಂದ್ಯಾವಳಿಯನ್ನು  ಆಡುವುದಕ್ಕೆ ಭಾರತ ಪ್ರವಾಸವನ್ನು ಆಸ್ಟ್ರೇಲಿಯಾ ಕೈಗೊಳ್ಳಲಿದೆ. ಆಸೀಸ್‌ಗೆ  ತಾವು ಸಂಪಾದಿಸಿದ ಟ್ರೋಫಿಗಳ ಸಾಲಿನಲ್ಲಿ ಟಿ ಟ್ವೆಂಟಿ ಪ್ರಶಸ್ತಿ ಅವರ ಕೈಗಿನ್ನೂ ದಕ್ಕಿಲ್ಲ . ಈಗ ಅದನ್ನು ಬುಟ್ಟಿಗೆ ಹಾಕಿಕೊಳ್ಳುವ ಗುರಿಯನ್ನು ಆಸೀಸ್ ಹೊಂದಿರುವುದಾಗಿ ಓಪನರ್ ಡೇವಿಡ್ ವಾರ್ನರ್ ತಿಳಿಸಿದ್ದಾರೆ.  ಟಿ 20 ಪ್ರಭುತ್ವದ ಹೋರಾಟದಲ್ಲಿ ಆಸೀಸ್  ಪದೇ ಪದೇ ಗುರಿ ತಪ್ಪುತ್ತಿದ್ದು,  2007ರಿಂದ ಐದು ಆವೃತ್ತಿಗಳು ನಡೆದಿದ್ದರೂ ಆಸೀಸ್‌ಗೆ ಟಿ 20 ಕಿರೀಟವು ಇನ್ನೂ ದಕ್ಕಿಲ್ಲ. 
 
 ಆದಾಗ್ಯೂ, 2016ರ ಆವೃತ್ತಿಯಲ್ಲಿ ಆಸ್ಟ್ರೇಲಿಯಕ್ಕೆ ಉತ್ತಮ ಅವಕಾಶಗಳಿವೆ. ಏಕೆಂದರೆ ಅನೇಕ ಆಸೀಸ್ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಿದ್ದರಿಂದ ಅಲ್ಲಿನ ವಾತಾವರಣ ಮತ್ತು ಪಿಚ್ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ಪರಿಚಯವಿದೆ ಎಂದು ವಾರ್ನರ್ ಹೇಳಿದರು. 
 
 ಭಾರತದ ಪ್ರವಾಸದಲ್ಲಿ ಅಲ್ಲಿನ ಪಿಚ್ ಪರಿಸ್ಥಿತಿ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಏಕೆಂದರೆ ಎಲ್ಲಾ ಆಟಗಾರರು ಅಲ್ಲಿ ಐಪಿಎಲ್ ಆಡಿದ್ದಾರೆ. ಯಾವುದೇ ತಂಡ ಆಯ್ಕೆಯಾದರು ಅಲ್ಲಿನ ಪರಿಸ್ಥಿತಿಗಳಿಗೆ ತಕ್ಕ ತಂಡವಾಗಿರುತ್ತದೆ ಎಂದು ವಾರ್ನರ್ ಹೇಳಿದ್ದಾರೆ. 
 
 ಟಿ 20 ವಿಶ್ವಕಪ್ ಗೆಲ್ಲುವುದಕ್ಕೆ ಇದು ಉತ್ತಮ ಅವಕಾಶ. ನಾವು ಬಹುಶಃ ಟಿ20 ಸ್ವರೂಪದಲ್ಲಿ ಸ್ವದೇಶದಲ್ಲಿ ಆಡಿದ್ದಕ್ಕಿಂತ ಹೆಚ್ಚಾಗಿ ವಿದೇಶದಲ್ಲಿ ಆಡಿದ್ದೇವೆ ಎಂದು ವಾರ್ನರ್ ಹೇಳಿದರು. 
 

ವೆಬ್ದುನಿಯಾವನ್ನು ಓದಿ