ಸ್ಟಾರ್ಕ್ ಅವರ ಎಸೆತದಲ್ಲಿ ಡಿಸಿಲ್ವ ನೀಡಿದ್ದ ಕ್ಯಾಚನ್ನು ಶಾನ್ ಮಾರ್ಶ್ ಶಾರ್ಟ್ ಕವರ್‌ನಲ್ಲಿ ಕೈಬಿಟ್ಟಿದ್ದರಿಂದ ಡಿಸಿಲ್ವಾಗೆ ಎರಡನೇ ಜೀವದಾನ ಸಿಕ್ಕಿತು. ಫೀಲ್ಡಿಂಗ್ ವೈಫಲ್ಯದ ಅನುಕೂಲ ಪಡೆದ ಇವರಿಬ್ಬರು ಮೈದಾನದ ಎಲ್ಲ ಮೂಲೆಗೂ ಚೆಂಡನ್ನು ಹೊಡೆದು ಆಯಾ ಮೈಲಿಗಲ್ಲನ್ನು ಮುಟ್ಟಿದರು. ಡಿಸಿಲ್ವಾ 116 ರನ್ ಮತ್ತು ಚಾಂಡಿಮಾಲ್ 64 ರನ್‌ಗಳಿಂದ ಅಜೇಯರಾಗಿ ಉಳಿದು ಶ್ರೀಲಂಕಾಗೆ ಆಸರೆಯಾಗಿ ನಿಂತಿದ್ದಾರೆ.