ಬಿಸಿಸಿಐ ವಿರುದ್ಧ ಅಸಂಖ್ಯಾತ ದೂರುಗಳು: ಲೋಧಾ ಸಮಿತಿ ತುರ್ತು ಸಭೆ

ಬುಧವಾರ, 24 ಆಗಸ್ಟ್ 2016 (20:21 IST)
ಸುಪ್ರೀಂಕೋರ್ಟ್ ನೇಮಿಸಿದ ನ್ಯಾ.ಲೋಧಾ ಸಮಿತಿಯು ಆಗಸ್ಟ್ 28ರಂದು ಸಭೆ ಸೇರಿ ಬಿಸಿಸಿಐಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕುರಿತು ಚರ್ಚಿಸಲಿದೆ. ಅದರಲ್ಲಿ ಮಂಡಳಿಯ ವಿರುದ್ಧ ಬಂದಿರುವ ಅಸಂಖ್ಯಾತ ದೂರುಗಳೂ ಸೇರಿವೆ. ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಲೋಧಾ ಸಮಿತಿಯು ನವದೆಹಲಿಯಲ್ಲಿ ಆಗಸ್ಟ್ 28ರಂದು ತುರ್ತು ಸಭೆ ನಡೆಸಲಿದೆ ಎಂದು ಸಮಿತಿಗೆ ಸಮೀಪವರ್ತಿ ಮೂಲಗಳು ಹೇಳಿವೆ.
 
ಬಿಸಿಸಿಐ ಸೆ.21ರಂದು ಎಜಿಎಂ ಪ್ರಕಟಿಸಿರುವುದು ಕೂಡ ಚರ್ಚೆಗೆ ಆಸ್ಪದ ಕಲ್ಪಿಸಿದೆ. ಸಮಿತಿಯು ತನ್ನ ವಿವೇಚನಾಧಿಕಾರ ಬಳಸಿ ಎಜಿಎಂ ಅನೂರ್ಜಿತವೆಂದು ಘೋಷಿಸುವ ಸಾಧ್ಯತೆಯಿದೆ.
 
 ಬಿಸಿಸಿಐ ಅಕ್ಟೋಬರ್ 15ರೊಳಗೆ 11 ಅಂಶಗಳ ಸುಧಾರಣೆಯನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಂಬಂಧಿಸಿದಂತೆ ಪಾಲನಾ ವರದಿಯನ್ನು ಸಲ್ಲಿಸಲಿದೆ. ಆದಾಗ್ಯೂ, ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಬಿಸಿಸಿಐ ಸಲ್ಲಿಸಿರುವ ಪುನರ್ಪರಿಶೀಲನಾ ಅರ್ಜಿಯ ತೀರ್ಪಿಗಾಗಿ ಕಾಯಲು ನಿರ್ಧರಿಸಲಾಯಿತು.

ವೆಬ್ದುನಿಯಾವನ್ನು ಓದಿ