ಶ್ರೀಶಾಂತ್, ಚಾಂಡಿಲಾ, ಚವಾಣ್ ದೋಷಮುಕ್ತಿ ಪ್ರಶ್ನಿಸಿ ದೆಹಲಿ ಕೋರ್ಟ್ ಅರ್ಜಿ

ಗುರುವಾರ, 3 ಸೆಪ್ಟಂಬರ್ 2015 (21:01 IST)
ಕ್ರಿಕೆಟ್ ಆಟಗಾರರಾದ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೋಷಮುಕ್ತಿಗೊಳಿಸಿದ ವಿಚಾರಣೆ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ದೆಹಲಿ ಪೊಲೀಸರು 38 ಅಂಶಗಳ ಪುನರ್ಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದೆ.  ಎಂಕೋಕಾಗೆ ಸಂಬಂಧಿಸಿದ ಕಾನೂನನ್ನು ವಿಚಾರಣೆ ಕೋರ್ಟ್ ತಪ್ಪಾಗಿ ವ್ಯಾಖ್ಯಾನಿಸಿದೆ ಎಂದು ದೆಹಲಿ ಕೋರ್ಟ್ ಅರ್ಜಿಯಲ್ಲಿ ತಿಳಿಸಿದೆ.
 
ವಿಶೇಷ ನ್ಯಾಯಾಧೀಶರು ನೀಡಿದ ತರ್ಕವನ್ನು ಒಪ್ಪಿಕೊಂಡರೆ ದೆಹಲಿಯಿಂದ ಹೊರಗೆ ತಮ್ಮ ಸಹಚರರ ಮೂಲಕ ಸಂಘಟಿತ ಅಪರಾಧ ಮಾಡುವುದು ಸುಲಭವಾಗುತ್ತದೆ. ಅಥವಾ ದೆಹಲಿಯ ಮಿತಿಯೊಳಗೆ ಅಪರಾಧ ಎಸಗಿ ದೆಹಲಿ ಹೊರಗೆ ಆಶ್ರಯ ಪಡೆಯುವುದು ಅಥವಾ ದೆಹಲಿಯ ಹೊರಗೆ ಸಂಪತ್ತಿನ ಸೃಷ್ಟಿ ಸುಲಭವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

 ಐಪಿಎಲ್ 6 ನೇ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿರುವ ಆರೋಪವು ಶ್ರೀಶಾಂತ್, ಅಂಕಿತ್ ಚೌಹಾಣ್, ಅಜಿತ್ ಚಾಂಡೀಲಾ ಮೊದಲಾದವರ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಈ ಅರ್ಜಿ ಸಲ್ಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ