ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಹುದ್ದೆಗಿದೆ ಭಾರೀ ಡಿಮ್ಯಾಂಡ್
ಆ ದೃಷ್ಟಿಯಿಂದ ಬಿಸಿಸಿಐ ಈಗ ಭವಿಷ್ಯದ ದೃಷ್ಟಿಯಿಂದ ನಾಯಕತ್ವದ ಸಾಮರ್ಥ್ಯವುಳ್ಳ ಆಟಗಾರನನ್ನು ಉಪನಾಯಕನಾಗಿ ನಿಯುಕ್ತಿಗೊಳಿಸಬಹುದು. ಈ ನಿಟ್ಟಿನಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೆಸರು ಮುಂಚೂಣಿಯಲ್ಲಿದೆ. ಈ ಇಬ್ಬರೂ ಕ್ರಿಕೆಟಿಗರು ಮೂರೂ ಮಾದರಿಯಲ್ಲಿ ಆಡುವ ಖಾಯಂ ಸದಸ್ಯರು. ಹೀಗಾಗಿ ಈ ಇಬ್ಬರಲ್ಲಿ ಒಬ್ಬರನ್ನು ಅಥವಾ ಸ್ಪ್ಲಿಟ್ ಕ್ಯಾಪ್ಟನ್ಸಿ ಮಾಡಿ ಟೆಸ್ಟ್ ತಂಡಕ್ಕೆ ಒಬ್ಬರು, ಸೀಮಿತ ಓವರ್ ಗೆ ಒಬ್ಬರನ್ನು ನಾಯಕರಾಗಿ ಬೆಳೆಸುವ ಉದ್ದೇಶದಿಂದ ಉಪನಾಯಕನ ಹುದ್ದೆಗೆ ಸೂಕ್ತರಾದವರನ್ನೇ ಬಿಸಿಸಿಐ ಆಯ್ಕೆ ಮಾಡಬಹುದು.