ಐರ್ಲೆಂಡ್ ವಿರುದ್ಧ ಮುಂದಿನ ಎನ್ಕೌಂಟರ್ನಲ್ಲಿ ಅವರು ಪುನಃ ಎರಡು ಸಿಕ್ಸರುಗಳನ್ನು ಬಾರಿಸಿದ್ದು 24 ರನ್ಗೆ ಔಟಾದರು. ಪಾಕಿಸ್ತಾನದ ವಿರುದ್ಧ ಆಕ್ಲೆಂಡ್ನಲ್ಲಿ ನಡೆದ ಪಂದ್ಯದಲ್ಲಿ ಅವರು 6 ಸಿಕ್ಸರುಗಳ ಮೂಲಕ 77 ರನ್ ಸ್ಕೋರ್ ಮಾಡಿದರು. ಗುರುವಾರ ಯುಎಇ ವಿರುದ್ಧ ಪಂದ್ಯದಲ್ಲಿ ಅವರು ಕೇವಲ ಒಂದು ರನ್ ಅಂತರದಿಂದ ಶತಕವಂಚಿತರಾದರೂ ನಾಲ್ಕು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಹೇಡನ್ ಅವರ ದಾಖಲೆಯನ್ನು ಮುರಿದರು.
31 ವರ್ಷ ವಯಸ್ಸಿನ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 50, 100 ಮತ್ತು 150 ರನ್ ಬಾರಿಸಿದ ದಾಖಲೆಗಳನ್ನು ಹೊಂದಿದ್ದು, ವಿಶ್ವಕಪ್ ಅಗ್ರ ಹತ್ತು ಸರ್ವಕಾಲಿಕ ಸ್ಕೋರರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು 1142 ರನ್ಗಳನ್ನು ಮುಟ್ಟಿದ್ದಾರೆ.