ಧರ್ಮಶಾಲಾ ಟೆಸ್ಟ್: ಊಟದ ವಿರಾಮ ಬೇಗ ಬಾರದಂತೆ ತಡೆದ ಕುಲದೀಪ್ ಯಾದವ್

ಸೋಮವಾರ, 27 ಮಾರ್ಚ್ 2017 (11:45 IST)
ಧರ್ಮಶಾಲಾ: ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಿದ ಮೇಲೆ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಊಟದ ವಿರಾಮಕ್ಕೆ ಅವಸರವಾದವರಂತೆ ಆಡುತ್ತಿದ್ದರು. ಆದರೆ ಅಂತಿಮ ಆಟಗಾರ ಕುಲದೀಪ್ ಯಾದವ್ ಇದಕ್ಕೆ ಅಡ್ಡಿಯಾದರು.

 

ನಿನ್ನೆ 6 ವಿಕೆಟ್ ಕಳೆದುಕೊಂಡು 248 ರನ್ ಗಳಿಗೆ ದಿನದಂತ್ಯ ಮಾಡಿದ್ದ ಟೀಂ ಇಂಡಿಯಾ ಇಂದು ರವೀಂದ್ರ ಜಡೇಜಾ ಬಿರುಸಿನ ಅರ್ಧಶತಕದ ನೆರವಿನಿಂದ (63) ಬೇಗನೇ 300 ರ ಗಡಿ ದಾಟಿತು. ವೃದ್ಧಿಮಾನ್ ಸಹಾ ಜತೆಗೂಡಿ 96 ರನ್ ಒಟ್ಟುಗೂಡಿಸಿದ ಜೋಡಿ ಭಾರತವನ್ನು ಸುರಕ್ಷಿ 317 ರನ್ ಗಳಿಸುವಷ್ಟರಲ್ಲಿ ಜಡೇಜಾ ರೂಪದಲ್ಲಿ ಬೇರ್ಪಟ್ಟಿತು.  

 
ಜಡೇಜಾ ಬೆನ್ನಿಗೆ ಜಿದ್ದಿಗೆ ಬಿದ್ದವರಂತೆ ಭಾರತೀಯ ಬ್ಯಾಟ್ಸ್ ಮನ್ ಗಳು ಒಬ್ಬರಾದ ಮೇಲೆ ಒಬ್ಬರು ಪೆವಿಲಿಯನ್ ಗೆ ಮರಳುತ್ತಿರುವುದನ್ನು ನೋಡಿದರೆ ನಿಗದಿತ ಅವಧಿಗೆ ಮೊದಲೇ ಊಟದ ವಿರಾಮ ಬರುವ ಅಪಾಯವಿತ್ತು. ಆದರೆ ಕೊನೆಯಲ್ಲಿ ಬಂದ ಕುಲದೀಪ್ ಯಾದವ್ ಹಾಗೂ ಉಮೇಶ್ ಯಾದವ್ 14 ರನ್ ಒಟ್ಟುಗೂಡಿಸಿ ಇನಿಂಗ್ಸ್ ಮನ್ನಡೆ 32 ರನ್ ಗಳಿಗೆ ವಿಸ್ತರಿಸಿದರು.

 

ಅಂತಿಮವಾಗಿ ಕುಲದೀಪ್ ಯಾದವ್ 7 ರನ್ ಗಳಿಸಿ ನಥನ್ ಲಿಯೋನ್ ವಿಕೆಟ್ ಒಪ್ಪಿಸಿದರು.ನಥನ್ ಲಿಯೋನ್ ಐದು ವಿಕೆಟ್ ಕಬಳಿಸಿದರು. ಭಾರತ 332 ರನ್ ಗಳಿಗೆ ಆಲೌಟ್ ಆಯಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ