ಮೈದಾನದಲ್ಲಿ ಕುಲದೀಪ್ ಯಾದವ್ ಮೇಲೆ ಸಿಟ್ಟು ಹೊರಹಾಕಿದ ಧೋನಿ
ಕುಲದೀಪ್ ಯಾದವ್ ಓವರ್ ನಡುವೆ ಫೀಲ್ಡಿಂಗ್ ಚೇಂಜ್ ಮಾಡುವಂತೆ ಧೋನಿಗೆ ಸೂಚಿಸುತ್ತಾರೆ. ಆದರೆ ಎಷ್ಟೇ ಹೇಳಿದರೂ ಧೋನಿ ಕಿವಿಗೊಡುವುದಿಲ್ಲ. ಆಗ ಕುಲದೀಪ್ ಯಾದವ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತಕ್ಷಣ ಧೋನಿ ‘ಬೌಲಿಂಗ್ ಮಾಡ್ತೀಯಾ? ಇಲ್ಲಾ ಬೌಲರ್ ಚೇಂಜ್ ಮಾಡ್ಲಾ?’ ಎಂದು ಸಿಟ್ಟಿನಿಂದಲೇ ಕೇಳುತ್ತಾರೆ. ಆಗ ಮರು ಮಾತಾಡದೇ ತಲೆ ತಗ್ಗಿಸಿಕೊಂಡು ಮುಂದಿನ ಬಾಲ್ ಎಸೆಯಲು ಕುಲದೀಪ್ ಸಿದ್ಧವಾಗುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.