ಟೀಂ ಇಂಡಿಯಾ ಆಟಗಾರರಿಗೆ ಬಸ್ ಚಾಲಕನಾಗಿದ್ದ ಧೋನಿ!
ಈ ವಿಚಾರವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ. 2008 ರಲ್ಲಿ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತರಾದ ದಿನ ಟೆಸ್ಟ್ ಕ್ರಿಕೆಟ್ ತಂಡಕ್ಕೂ ಧೋನಿ ಅಧಿಕೃತವಾಗಿ ನಾಯಕರಾದಾಗ ಬಸ್ ಚಲಾಯಿಸಿದ್ದರಂತೆ.
ಆ ದಿನ ನಾಗ್ಪುರದಲ್ಲಿ ಪಂದ್ಯ ಮುಗಿದ ಬಳಿಕ ಧೋನಿ ಅನಿಲ್ ಕುಂಬ್ಳೆಯನ್ನು ಭುಜದ ಮೇಲೆ ಹೊತ್ತು ಮೈದಾನಕ್ಕೆ ಸುತ್ತು ಹೊಡೆದಿದ್ದರು. ಬಳಿಕ ತಂಡ ಹೋಟೆಲ್ ರೂಂಗೆ ಮರಳುವಾಗ ಸ್ವತಃ ತಾವೇ ಬಸ್ ಚಾಲಕರಾದರಂತೆ. ನಾಯಕನಾದವನು ಬಸ್ ಚಾಲಕನಾಗಿದ್ದನ್ನು ನನ್ನ ಕಣ್ಣುಗಳಿಗೇ ನಂಬಲಾಗಲಿಲ್ಲ. ಆದರೆ ಧೋನಿ ಇಂತಹ ಹಲವು ಅಚ್ಚರಿಗಳನ್ನು ನಮಗೆ ನೀಡುತ್ತಲೇ ಇರುತ್ತಾರೆ ಎಂದು ವಿವಿಎಸ್ ಸ್ಮರಿಸಿಕೊಂಡಿದ್ದಾರೆ.