ಧೋನಿ ತಂಡಕ್ಕೆ ರೆಸ್ಟ್ ಬೇಕು, ಸಂಭ್ರಮಾಚರಣೆಗೆ ಟೈಮ್ ಇಲ್ಲ

ಸೋಮವಾರ, 16 ಫೆಬ್ರವರಿ 2015 (18:38 IST)
ಇಡೀ ರಾಷ್ಟ್ರ ಪಾಕ್ ವಿರುದ್ಧ ಭಾರತದ ವಿಶ್ವಕಪ್ ಜಯಕ್ಕೆ ಸಂಭ್ರಮಿಸುವ ಮೂಡ್‌ನಲ್ಲಿದ್ದರೆ ಧೋನಿ ಮತ್ತು ಅವರ ತಂಡಕ್ಕೆ ಮಿಷನ್ ಡಿಫೆನ್ಸ್ ಈಗತಾನೇ ಆರಂಭವಾಗಿದ್ದು, ಸಂಭ್ರಮಾಚರಣೆಗೆ ಟೈಮ್ ಇಲ್ಲವಂತೆ. 
 
 ಭಾರತದ ಅಭಿಮಾನಿಗಳು ತಡರಾತ್ರಿವರೆಗೆ ಅಡೆಲೈಡ್‌ನಲ್ಲಿ ಸಂಭ್ರಮಿಸುತ್ತಿದ್ದರೆ ಆಟಗಾರರು ಮಾತ್ರ ಇವೆಲ್ಲ ಮೋಜಿನಿಂದ  ದೂರ ಉಳಿದು ವಿಶ್ರಾಂತಿ ಬಯಸಿದರು. ಇದು ಪಾಕ್ ವಿರುದ್ಧ ಮೊದಲ ಪಂದ್ಯ. ಆದರೆ ಒಂದು ಜಯಕ್ಕೆ ನಾನು ಸಂಭ್ರಮಾಚರಣೆ  ಏಕೆ ಮಾಡಬೇಕು ನಾವೇನು ವಿಶ್ವಕಪ್ ಗೆದ್ದಿದ್ದೇವೆಯೇ. ಆಟಗಾರರು ಆಯಾಸಗೊಂಡಿದ್ದು  ತುಂಬಾ ವಿಶ್ರಾಂತಿ ಅಗತ್ಯವಿದೆ.  ಪ್ರತಿಯೊಬ್ಬರೂ ಅವರ ಕೋಣೆಗಳಿಗೆ ತೆರಳಿದ್ದಾರೆ ಎಂದು ಭಾರತ ಬೆಂಬಲ ಸಿಬ್ಬಂದಿಯ ಸದಸ್ಯರೊಬ್ಬರು ತಿಳಿಸಿದರು.

ಭಾರತ ತಂಡ ಅಡೆಲೈಡ್‌ನಿಂದ ಮೆಲ್ಬರ್ನ್‌ಗೆ ಬೆಳಗಿನ ಫ್ಲೈಟ್‌ಗೆ ಬಂದಿದ್ದಾರೆ. ಪ್ರತಿಯೊಬ್ಬರೂ ಪಂದ್ಯದ ನಂತರ ಪ್ಯಾಕಿಂಗ್ ಮಾಡಬೇಕಿತ್ತು ಮತ್ತು ಒಳ್ಳೆಯ ನಿದ್ರೆ ಅಗತ್ಯವಾಗಿದೆ ಎಂದು ಮೂಲವೊಂದು ಹೇಳಿದೆ.ತಂಡದಲ್ಲಿ ಸಾಮಾನ್ಯ ಕಲ್ಪನೆಯೇನೆಂದರೆ ಸಂಭ್ರಮ ಪಡುವುದಕ್ಕೆ ಯಾವ ಕಾರಣವೂ ಇಲ್ಲ.

ಏಕೆಂದರೆ ಮುಂದಿನ ಎದುರಾಳಿ ಎಬಿ ಡಿವಿಲಿಯರ್ಸ್ ನೇತೃತ್ವದ ದಕ್ಷಿಣ ಆಫ್ರಿಕಾ ಮತ್ತು ವಿಶ್ವದ ಅತ್ಯುತ್ತಮ ವೇಗದ ಬೌಲರ್ ಡೇಲ್ ಸ್ಟೈನ್ ಅವರ ಬೌಲಿಂಗ್ ದಾಳಿ ಎದುರಿಸಬೇಕಿದೆ.

ವೆಬ್ದುನಿಯಾವನ್ನು ಓದಿ