ಕೂಲ್ ಕ್ಯಾಪ್ಟನ್ ಧೋನಿಗೆ ಜನ್ಮದಿನದ ಸಂಭ್ರಮ

ಶುಕ್ರವಾರ, 7 ಜುಲೈ 2023 (08:40 IST)
ರಾಂಚಿ: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮದಿನದ ಸಂಭ್ರಮ. ಇಂದು ಅವರು 42 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಜುಲೈ 7 ಬಂತೆಂದರೆ ಧೋನಿ ಅಭಿಮಾನಿಗಳ ಪಾಲಿಗೆ ಹಬ್ಬದ ದಿನವಾಗಿರುತ್ತದೆ. ಧೋನಿ ಅದೃಷ್ಟ ಸಂಖ್ಯೆಯೂ 7 ಆಗಿದೆ. ಇಂದು ಅವರ ಜನ್ಮದಿನಕ್ಕೆ ನೆಟ್ಟಿಗರು, ಸಹ ಕ್ರಿಕೆಟಿಗರು ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸುತ್ತಿದ್ದಾರೆ.

ಭಾರತಕ್ಕೆ ಏಕದಿನ, ಟಿ20 ವಿಶ್ವಕಪ್ ಜೊತೆಗೆ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದುಕೊಟ್ಟ ಧೋನಿ ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ನಲ್ಲಿ ತಮ್ಮ ತಂಡಕ್ಕೆ ಐದನೇ ಪ್ರಶಸ್ತಿ ತಂದುಕೊಟ್ಟಿದ್ದರು. ಹೀಗಾಗಿ ಈ ಬಾರಿ ಅವರ ಹುಟ್ಟುಹಬ್ಬ ವಿಶೇಷವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ