ಧೋನಿ ಇಫೆಕ್ಟ್: ಕ್ಯಾಂಡಿ ಕ್ರಶ್ ಗೇಮ್ಸ್ ಡೌನ್ ಲೋಡ್ ಸಂಖ್ಯೆ ಹೆಚ್ಚಳ!

ಗುರುವಾರ, 29 ಜೂನ್ 2023 (09:00 IST)

ಮುಂಬೈ: ಇತ್ತೀಚೆಗೆ ಕ್ರಿಕೆಟಿಗ ಧೋನಿ ವಿಮಾನ ಪ್ರಯಾಣದ ವೇಳೆ ಕ್ಯಾಂಡಿ ಕ್ರಶ್ ಆಡುತ್ತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಧೋನಿಗೆ ಗಗನಸಖಿ ಪ್ರೀತಿಯಿಂದ ಚಾಕಲೇಟ್‍ ಗಳನ್ನು ಟ್ರೇಯಲ್ಲಿ ತಂದುಕೊಡುವ ವಿಡಿಯೋ ಪ್ರಕಟವಾಗಿತ್ತು. ಚಾಕಲೇಟ್ ಗಿಂತ ನೆಟ್ಟಿಗರ ಗಮನ ಸೆಳೆದಿದ್ದು ಧೋನಿಯ ಪಕ್ಕದಲ್ಲಿದ್ದ ಟ್ಯಾಬ್. ಅದರಲ್ಲಿ ಧೋನಿ ಕ್ಯಾಂಡಿ ಕ್ರಶ್ ಗೇಮ್ಸ್ ತೆರೆದು ಕೂತಿದ್ದರು. ಧೋನಿ ಕೂಡಾ ಈ ಗೇಮ್ಸ್ ಆಡ್ತಾರೆ ಎಂಬುದೇ ದೊಡ್ಡ ಸುದ್ದಿಯಾಗಿತ್ತು.

ಇದರ ಬೆನ್ನಲ್ಲೇ ಈಗ ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡುವವರ ಸಂಖ್ಯೆಯೂ ಒಮ್ಮೆಲೆ ಹೆಚ್ಚಳವಾಗಿದೆ. ಧೋನಿ ಆ ಗೇಮ್ಸ್ ಆಡುತ್ತಾರೆಂದು ತಿಳಿದ ಮೇಲೆ ಕೆಲವು ಅಭಿಮಾನಿಗಳೂ ತಮ್ಮ ಮೊಬೈಲ್, ಟ್ಯಾಬ್ ಗಳಲ್ಲಿ ಕ್ಯಾಂಡಿ ಕ್ರಶ್ ಗೇಮ್ಸ್ ಡೌನ್ ಲೋಡ್ ಮಾಡಿದ್ದಾರೆ. ಹೀಗೆ ಸುಮಾರು 30 ಲಕ್ಷ ಡೌನ್ ಲೋಡ್ ಆಗಿದೆ! ಅದೂ ಕೇವಲ 3 ಗಂಟೆಯಲ್ಲಿ ಎಂಬುದು ವಿಶೇಷ. ಇದು ಧೋನಿ ಇಫೆಕ್ಟ್ ಅಲ್ಲದೆ ಬೇರೇನೂ ಅಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ