ಚೆನ್ನೈನಲ್ಲಿ ಶ್ರೀನಿವಾಸನ್ ಭೇಟಿ ಮಾಡಿದ ಧೋನಿ ವಿರುದ್ಧ ಟೀಕೆ

ಶುಕ್ರವಾರ, 23 ಅಕ್ಟೋಬರ್ 2015 (18:46 IST)
ಭಾರತದ ಏಕದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಕ್ಕೆ ಕೆಲವು ವಲಯಗಳಿಂದ ಟೀಕೆ ಎದುರಿಸಿದ್ದಾರೆ.  ಧೋನಿ ಶ್ರೀನಿವಾಸನ್ ಅವರನ್ನು ಉಪಾಹಾರದಲ್ಲಿ ಭೇಟಿ ನೀಡಿ ಸುಮಾರು 45 ನಿಮಿಷಗಳ ಕಾಲ ಅವರಜತೆ ಇದ್ದರು. ಅವರು ನಿರ್ಗಮಿಸಿದ ನಂತರ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಶ್ರೀನಿವಾಸನ್ ಅವರನ್ನು ಭೇಟಿಯಾಗಿದ್ದರು.
 
ಐಪಿಎಲ್ ಫ್ರಾಂಚೈಸಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರಾಗಿದ್ದ ಶ್ರೀನಿವಾಸನ್ ಅವರು ಹಿತಾಸಕ್ತಿ ಸಂಘರ್ಷದ ಕಾರಣದಿಂದ ಚೆನ್ನೈ ತಂಡದಿಂದ ಬೇರೆಯಾಗಿದ್ದರು. 
 ಶ್ರೀನಿವಾಸನ್ ಅಳಿಯನ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿಬಂದ ಬಳಿಕ ಶ್ರೀನಿವಾಸನ್‌ ಅವರನ್ನು ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಗಿತ್ತು. ಈಗ ಅವರು ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಿಎಸ್‌ಕೆ ಮತ್ತು ರಾಜಸ್ಥಾನ ರಾಯಲ್ಸ್ ಎರಡೂ ತಂಡಗಳನ್ನು ಲೋಧಾ ಸಮಿತಿಯು ಐಪಿಎಲ್‌ನಿಂದ 2 ವರ್ಷಗಳ ಕಾಲ ನಿಷೇಧ ವಿಧಿಸಿದೆ. ಧೋನಿ ಸಿಎಸ್‌ಕೆಯ ನಾಯಕರಾಗಿ ಕಳೆದ 8 ಸೀಸನ್‌ನಿಂದ ಕಾರ್ಯನಿರ್ವಹಿಸಿದ್ದು, ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ ಧೋನಿ ಶ್ರೀನಿವಾಸನ್ ಅವರನ್ನು ಭೇಟಿಯಾಗುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಕೆಲವು ವಲಯಗಳಲ್ಲಿ ಹರಿದಾಡುತ್ತಿದೆ. 
 

ವೆಬ್ದುನಿಯಾವನ್ನು ಓದಿ