ಮುಂಬೈ: ಮುಂಬರುವ ವಿಶ್ವಕಪ್ ದೃಷ್ಟಿಯಿಂದ ವೇಗಿಗಲು ಐಪಿಎಲ್ ನಿಂದ ಹೊರಗುಳಿಯುವುದೇ ಒಳ್ಳೆಯದು ಎಂಬ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯವನ್ನು ಧೋನಿ ತಳ್ಳಿಹಾಕಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಧೋನಿ ಕೊಹ್ಲಿ ಅಭಿಪ್ರಾಯಕ್ಕೆ ತದ್ವಿವಿರುದ್ಧವಾಗಿ ಮಾತನಾಡಿದ್ದಾರೆ. ಐಪಿಎಲ್ ನಿಂದ ವೇಗಿಗಳು ಸುಸ್ತಾಗಬಹುದು, ಗಾಯಕ್ಕೊಳಗಾಗಬಹುದು ಇದರಿಂದ ನಂತರ ಬರಲಿರುವ ಏಕದಿನ ವಿಶ್ವಕಪ್ ಆಡಲು ಸಾಧ್ಯವಾಗದೇ ಇರಬಹುದು ಎಂಬ ಕೊಹ್ಲಿ ಅಭಿಪ್ರಾಯಕ್ಕೆ ವಿರುದ್ಧವಾಗಿ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಎನ್ನುವುದು ಬೌಲರ್ ಗಳಿಗೆ ಮುಂಬರುವ ವಿಶ್ವಕಪ್ ಗೆ ತಯಾರಾಗಲು ಪರ್ಫೆಕ್ಟ್ ವೇದಿಕೆಯಾಗಲಿದೆ. ನಾಲ್ಕು ಓವರ್ ಬೌಲ್ ಮಾಡುವುದರಿಂದ ಸುಸ್ತಾಗಲ್ಲ. ನಿಜ ಹೇಳಬೇಕೆಂದರೆ ಈ ನಾಲ್ಕು ಓವರ್, ವೈವಿದ್ಯಮಯವಾಗಿ ಬೌಲಿಂಗ್ ಮಾಡಲು ನಿಮಗೆ ಕಲಿಸುತ್ತದೆ. ನನ್ನ ಪ್ರಕಾರ ಬೌಲರ್ ಗಳು ಸರಿಯಾದ ಶಿಸ್ತುಬದ್ಧ ಆಹಾರ ಕ್ರಮ, ನಿದ್ರೆ ಮಾಡಿದರೆ ಐಪಿಎಲ್ ಆಡುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ