ಟೀಕಾಕಾರರಿಗೆ ಧೋನಿ ಖಡಕ್ ವಾರ್ನಿಂಗ್

ಸೋಮವಾರ, 18 ಸೆಪ್ಟಂಬರ್ 2017 (09:19 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅಂತಹದ್ದೊಂದು ಇನಿಂಗ್ಸ್ ಆಡದೇ ಇದ್ದಿದ್ದರೆ ಭಾರತಕ್ಕೆ ಜಯ ಬಿಡಿ, ಹೀನಾಯ ಸೋಲು ಖಚಿತವಾಗಿತ್ತು. ಆದರೆ ಧೋನಿ ಮತ್ತೊಮ್ಮೆ ತಂಡವನ್ನು ದಡದತ್ತ ಸಾಗಿಸಿದರು. ಪರಿಣಾಮ ಡಕ್ ವರ್ತ್ ಲೂಯಿಸ್ ನಿಯಮದ ಅನುಸಾರ ಭಾರತಕ್ಕೆ 26 ರನ್ ರನ್ ಗಳ ಗೆಲುವು ಸಿಕ್ಕಿತು.


ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಸೀಸ್ ಬೌಲರ್ ಗಳು ತಾವು ಲಂಕಾ, ವಿಂಡೀಸ್ ಬೌಲರ್ ಗಳಂತಲ್ಲ ಎಂದು ಆರಂಭದಲ್ಲಿಯೇ ತೋರಿಸಿಕೊಟ್ಟರು. ಆಸೀಸ್ ನ ವೇಗದ ಬೌಲಿಂಗ್ ಗೆ ಭಾರತದ ಮೇಲ್ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಜುಜುಬಿ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ, ರೆಹಾನೆ, ಮನೀಶ್ ಪಾಂಡೆ ವಿಫಲರಾಗಿದ್ದು, ಭಾರತಕ್ಕೆ ದುಬಾರಿಯಾಯ್ತು.

ಆದರೆ ನಂತರ ಕ್ರೀಸ್ ಗೆ ಬಂದ ಧೋನಿ ಕೊಂಚ ಹೊತ್ತು ಕೇದಾರ್ ಜಾದವ್ ಜತೆಗೆ ಇನಿಂಗ್ಸ್ ಕಟ್ಟುವ ಯತ್ನ ನಡೆಸಿದರು. ಆದರೆ ಜಾದವ್ 40 ರನ್ ಗಳಿಸುವಷ್ಟರಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಭಾರತದ ಕತೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮತ್ತೆ ಧೋನಿ ಬಂಡೆಯಂತೆ ನಿಂತರು.

ಯುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಕ್ರೀಸ್ ನಲ್ಲಿಯೇ ಬ್ಯಾಟಿಂಗ್ ಪಾಠ ಹೇಳಿಕೊಟ್ಟರು. ಕ್ಷಣ ಕ್ಷಣಕ್ಕೂ ಪಾಂಡ್ಯಗೆ ನಿರ್ದೇಶನ ನೀಡುತ್ತಾ ದೊಡ್ಡ ಇನಿಂಗ್ಸ್ ಕಟ್ಟಿದರು. ಇದರಲ್ಲಿ ಪಾಂಡ್ಯ ಕೊಡುಗೆ 83 ರನ್. ಧೋನಿಯದ್ದು 79 ರನ್. ಅಂತೂ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಲು ಶಕ್ತವಾಯಿತು. ಆದರೆ ಅಷ್ಟರಲ್ಲಿ ಮಳೆ ಸುರಿದಿದ್ದರಿಂದ ಪಂದ್ಯ 21 ಓವರ್ ಗೆ ಇಳಿಸಸ್ಪಟ್ಟಿತು. ಗುರಿ 162 ರನ್ ಆಗಿತ್ತು. ಆದರೆ ಭಾರತದ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ ಆಸೀಸ್ 137 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ…  ಪ್ರಧಾನಿ ಮೋದಿ ಬರ್ತ್ ಡೇಗೆ ಗೆಲುವಿನ ಉಡುಗೊರೆ ಅರ್ಪಿಸಿದ ಪಿವಿ ಸಿಂಧು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ