ಕೋಚ್ ಆಯ್ಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸೆಹ್ವಾಗ್ ವಿರುದ್ಧ ಗಂಗೂಲಿ ಕಿಡಿ

ಭಾನುವಾರ, 17 ಸೆಪ್ಟಂಬರ್ 2017 (12:38 IST)
ಮುಂಬೈ: ಬಿಸಿಸಿಐ ಜತೆ ತನಗೆ ‘ಸೆಟ್ಟಿಂಗ್’ ಸರಿ ಬರಲಿಲ್ಲ. ಅದಕ್ಕೇ ಕೋಚ್ ಆಗಿ ಆಯ್ಕೆಯಾಗಲಿಲ್ಲ ಎಂದು ಕೋಚ್ ಆಯ್ಕೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸೆಹ್ವಾಗ್ ವಿರುದ್ಧ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಸಿಟ್ಟಿಗೆದ್ದಿದ್ದಾರೆ.


ಟೀಂ ಇಂಡಿಯಾ ಕೋಚ್ ಆಯ್ಕೆಗಾರರಲ್ಲಿ ಒಬ್ಬರಾಗಿರುವ ಗಂಗೂಲಿ ಸೆಹ್ವಾಗ್ ಹೇಳಿಕೆ ಮೂರ್ಖತನದ್ದು ಎಂದಿದ್ದಾರೆ. ‘ಈ ಬಗ್ಗೆ ನನಗೆ ಪ್ರತಿಕ್ರಿಯಿಸುವುದಕ್ಕೆ ಏನೂ ಇಲ್ಲ. ಆದರೆ ಸೆಹ್ವಾಗ್ ಹೇಳಿಕೆ ಮೂರ್ಖತನದ್ದು’ ಎಂದಿದ್ದಾರೆ.

ಕೋಚ್ ಆಯ್ಕೆ ನಡೆಸುವವರೊಂದಿಗೆ ತನಗೆ ಸರಿಯಾದ ಸೆಟ್ಟಿಂಗ್ ಇರದ ಕಾರಣಕ್ಕೆ ತಾನು ಕೋಚ್ ಆಗಲಿಲ್ಲ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಸೆಹ್ವಾಗ್ ಹೇಳಿದ್ದರು. ಈ ಮೂಲಕ ಪರೋಕ್ಷವಾಗಿ ಹಾಲಿ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ವಿರುದ್ಧವೂ ಕಿಡಿ ಕಾರಿದ್ದರು.

ಇದನ್ನೂ ಓದಿ.. ಮತ್ತೆ ಎಡವಟ್ಟು ಮಾಡಿದ ರಾಹುಲ್ ಗಾಂಧಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ