ಚಿಪಾಕ್ ನಲ್ಲಿ ವಿದಾಯ? ಅಭಿಮಾನಿಗಳಿಗೆ ಧೋನಿ ಗಿಫ್ಟ್
ಧೋನಿ ಮಂಡಿ ನೋವಿನಿಂದ ಬಳಲುತ್ತಿದ್ದ ಮಂಡಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಮೈದಾನಕ್ಕೆ ಸುತ್ತುಹಾಕಿದ್ದಾರೆ. ಸುತ್ತು ಹಾಕುವಾಗ ತಮಗೆ ಅಪಾರ ಬೆಂಬಲ ನೀಡುವ ಅಭಿಮಾನಿಗಳತ್ತ ಗಿಫ್ಟ್ ಎಸೆಯುತ್ತಾ ಅಭಿನಂದನೆ ಸ್ವೀಕರಿಸಿದ್ದಾರೆ. ಅಷ್ಟೇ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಮೈದಾನಕ್ಕೆ ಓಡಿ ಬಂದು ಧೋನಿ ಕೈಯಿಂದ ತಮ್ಮ ಶರ್ಟ್ ನಲ್ಲಿ ಹಸ್ತಾಕ್ಷರ ಬರೆಯಿಸಿಕೊಂಡಿದ್ದಾರೆ.
ಧೋನಿಯ ಪರಿಸ್ಥಿತಿ ನೋಡಿದರೆ ಚಿಪಾಕ್ ನಲ್ಲಿ ಇದು ಅವರ ಕೊನೆಯ ಪಂದ್ಯವಾಗಿತ್ತು ಎನ್ನುವಂತಿತ್ತು. ಧೋನಿ ಮುಂದಿನ ವರ್ಷ ಐಪಿಎಲ್ ಆಡುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಸದ್ಯಕ್ಕೆ ಅವರ ಆರೋಗ್ಯ ಅವರಿಗೆ ಕೈ ಹಿಡಿಯುತ್ತಿಲ್ಲ. ಹೀಗಾಗಿ 41 ವರ್ಷದ ದಿಗ್ಗಜನಿಗೆ ಇದೇ ಕೊನೆಯ ಐಪಿಎಲ್ ಆಗಿರುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಧೋನಿ ಚಿಪಾಕ್ ಮೈದಾನಕ್ಕೆ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಮೂಲಕ ನಿವೃತ್ತಿಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಧೋನಿಯ ಈ ವರ್ತನೆ ಅಭಿಮಾನಿಗಳನ್ನು ಭಾವುಕರಾಗಿಸಿದೆ. ಭಾರತೀಯ ಕ್ರಿಕೆಟ್ ಕಂಡ ಯಶಸ್ವೀ ನಾಯಕನಿಗೆ ವಿದಾಯದ ಪಂದ್ಯ ಎನ್ನುವ ಕಾರಣಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕವೂ ಥ್ಯಾಂಕ್ಯೂ ಧೋನಿ ಎಂದು ಟ್ರೆಂಡ್ ಮಾಡುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.