ಟೀಂ ಇಂಡಿಯಾಕ್ಕೆ ಈಗಲೂ ಧೋನಿಯೇ ಕ್ಯಾಪ್ಟನ್ ಎನ್ನುವುದಕ್ಕೆ ನಿನ್ನೆಯ ಪಂದ್ಯದಲ್ಲಿ ಸಿಕ್ಕಿತು ಸಾಕ್ಷಿ!

ಶನಿವಾರ, 22 ಸೆಪ್ಟಂಬರ್ 2018 (10:02 IST)
ದುಬೈ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಧಿಕೃತವಾಗಿ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿ ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಹಾಗಿದ್ದರೂ ತಂಡದಲ್ಲಿ ರೋಹಿತ್  ಕ್ಯಾಪ್ಟನ್ ಧೋನಿಯೇ ಆಗಿದ್ದಾರೆ ಎನ್ನುವುದಕ್ಕೆ ನಿನ್ನೆಯ ಪಂದ್ಯದಲ್ಲಿ ಸ್ಪಷ್ಟ ಸಾಕ್ಷ್ಯ ಸಿಕ್ಕಿದೆ. ಅದೂ ಎರಡೆರಡು ಬಾರಿ!

ಬಾಂಗ್ಲಾದೇಶ ಬ್ಯಾಟಿಂಗ್ ಮಾಡುತ್ತಿದ್ದಾಗ ಹಲವು ದಿನಗಳ ನಂತರ ತಂಡಕ್ಕೆ ಬಂದ ರವೀಂದ್ರ ಜಡೇಜಾಗೆ ಎದುರಾಳಿಗಳು ಸತತವಾಗಿ ಎರಡು ಬೌಂಡರಿ ಬಾರಿಸಿದರು. ಆದರೆ ರೋಹಿತ್ ಫೀಲ್ಡಿಂಗ್ ಬದಲಾಯಿಸಲಿಲ್ಲ. ಆಗ ತಕ್ಷಣ ರೋಹಿತ್ ಬಳಿಗೆ ದೌಡಾಯಿಸಿದ ಧೋನಿ ಹೇಗೆ ಫೀಲ್ಡಿಂಗ್ ಸೆಟ್ ಮಾಡಬೇಕೆಂದು ಹೇಳಿಕೊಟ್ಟರು. ಮರುಕ್ಷಣವೇ ಬಾಂಗ್ಲಾ ವಿಕೆಟ್ ಕೂಡಾ ಬಿತ್ತು!

ನಂತರ ಧೋನಿ ಗೆಲುವಿನ ರನ್ ಬಾರಿಸುವ ಯತ್ನದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ಔಟ್ ಆಗಿದ್ದರು. ಈ ಸಂದರ್ಭದಲ್ಲಿ ತಾವು ಔಟ್ ಎಂದು ಗೊತ್ತಿದ್ದರೂ ನಾನ್ ಸ್ಟ್ರೈಕರ್ ಕಡೆಗೆ ಓಡಿದ ಧೋನಿ ಅಲ್ಲಿದ್ದ ರೋಹಿತ್ ಶರ್ಮಾಗೆ ಸ್ಟ್ರೈಕರ್ ಎಂಡ್ ಗೆ ಬಾ ಎಂದು ಸನ್ನೆ ಮಾಡುತ್ತಲೇ ತೆರಳಿದರು. ಇದರಿಂದಾಗಿ ಮುಂದಿನ ಎಸೆತ ಎದುರಿಸುವ ಅವಕಾಶ ಹೊಸದಾಗಿ ಕ್ರೀಸ್ ಗೆ ಬಂದ ಬ್ಯಾಟ್ಸ್ ಮನ್ ಬದಲಿಗೆ ರೋಹಿತ್ ಶರ್ಮಾಗೆ ಸಿಕ್ಕಿತು. ಇದರಿಂದ ತಂಡಕ್ಕೆ ಹೆಚ್ಚಿನ ಡ್ಯಾಮೇಜ್ ಆಗಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ