ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಧೋನಿಗೆ ಕೊಡ್ತು ಕಿಕ್

ಶನಿವಾರ, 22 ಸೆಪ್ಟಂಬರ್ 2018 (09:14 IST)
ದುಬೈ: ಬಾಂಗ್ಲಾದೇಶ ವಿರುದ್ಧ ಏಷ್ಯಾ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಜಯಗಳಿಸಿದೆ. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಹೈಲೈಟ್ ಆಯಿತು.

ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಇದುವರೆಗೆ ಟೀಕಾಕಾರರಿಂದ ಸಾಕಷ್ಟು ಟೀಕೆಗೊಳಗಾಗಿದ್ದ ಧೋನಿಗೆ ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಸಿಕ್ಕಿತ್ತು. ಅದನ್ನು ಅವರು ಸರಿಯಾಗಿಯೇ ಬಳಸಿಕೊಂಡರು.

ಅವರ ಬ್ಯಾಟಿಂಗ್ ನಲ್ಲಿ ಮತ್ತೆ ಹಳೆಯ ಧೋನಿಯ ಛಾಯೆ ಕಾಣಿಸಿತ್ತು. ಕೊನೆಯದಾಗಿ ಎಂದಿನಂತೆ ತಮ್ಮ ಶೈಲಿಯಲ್ಲಿ ಸಿಕ್ಸರ್ ಹೊಡೆದು ಗೆಲುವು ದಾಖಲಿಸಲು ಹೊರಟು ದುರದೃಷ್ಟವಶಾತ್ ಔಟಾದರು. ಆದರೂ ಅದಕ್ಕೆ ಮೊದಲು 33 ರನ್ ಗಳಿಸಿದರು.

ಇನ್ನು ಆರಂಭಿಕರಾದ ರೋಹಿತ್ ಶರ್ಮಾ ಮತ್ತೊಂದು ಪ್ರಚಂಡ ಇನಿಂಗ್ಸ್ ಆಡಿ 83 ರನ್ ಗಳಿಸಿದರು. ಶಿಖರ್ ಧವನ್ 40 ರನ್ ಗಳಿಸಿ ಅವರಿಗೆ ಉತ್ತಮ ಸಾಥ್ ನೀಡಿದರು. ಅಂಬುಟಿ ರಾಯುಡು ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಂ ಇಂಡಿಯಾ 36.2 ಓವರ್ ಗಳಲ್ಲಿ 174 ರನ್ ಗಳಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ