ಅಪಾಯದ ಸನ್ನಿವೇಶಗಳಲ್ಲಿ ಪಾರಾಗುವುದು ತಮಗೆ ಗೊತ್ತು: ಧೋನಿ

ಶನಿವಾರ, 7 ಮಾರ್ಚ್ 2015 (12:33 IST)
ತಂಡಕ್ಕೆ ಸಂಕಷ್ಟದ ಸನ್ನಿವೇಶಗಳಲ್ಲಿ ಆಪದ್ಬಾಂಧವ ಎಂದು ಪರಿಗಣಿಸಲಾದ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಕೂಡ ಇತರರಂತೆ ಒತ್ತಡದ ಭಾವನೆ ಅನುಭವಿಸುವುದಾಗಿ ಹೇಳಿದ್ದಾರೆ. ಆದರೆ ಅಪಾಯಕಾರಿ ಸನ್ನಿವೇಶಗಳಲ್ಲಿ ಪಾರಾಗುವ ಕ್ರಮವನ್ನು ನಿರ್ವಹಿಸುವುದು ಹೇಗೆಂದು  ತಮಗೆ ಗೊತ್ತಿದೆ ಎಂದು ಹೇಳಿದರು.ನಿ ಅವರ ಅಜೇಯ 45 ರನ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪ್ರಯಾಸದ ಗೆಲುವು ಗಳಿಸಿತ್ತು.
 
ನಾನು ಸಂಕಷ್ಟದ ಸನ್ನಿವೇಶದಿಂದ ಪಾರಾಗುವುದು ಹೇಗೆಂದು ತಿಳಿದಿದ್ದೇನೆ. ಆದರೆ ಪ್ರತಿ ಬಾರಿ ನಾನು ಯಶಸ್ವಿಯಾಗುವುದಿಲ್ಲ. ಆದರೆ ಅದರಿಂದ ಪಾರಾಗುವ ವಿಧಾನ ಗೊತ್ತಿದ್ದರೆ ಅದು ಸುಲಭವಾಗುತ್ತದೆ ಎಂದು ನಾಯಕ ಧೋನಿ ಹೇಳಿದರು. ಧೋನಿ ಕಳೆದ ಒಂದು ದಶಕದಲ್ಲಿ ತಮ್ಮ ಆಟದಲ್ಲಿ ಸುಧಾರಣೆ ಮಾಡಿಕೊಂಡಿದ್ದು, ಸೀಮಿತ ಓವರುಗಳ ಪಂದ್ಯದಲ್ಲಿ ಉತ್ತಮ ಫಿನಿಷರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
 
ನಾನು ಬೇಡಿಕೆಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುತ್ತೇನೆ. ಆ ಕಾರಣದಿಂದ ನನಗೆ ಅನುಕೂಲವಾಗಿದೆ ಎಂದು ಧೋನಿ ಹೇಳಿದರು. ನಿನ್ನೆ ನಡೆದ ಪಂದ್ಯದಲ್ಲಿ ಮೇಲಿನ ಕ್ರಮಾಂಕದ ಆಟಗಾರರು ಸಂಪೂರ್ಣವಾಗಿ ವಿಫಲವಾದ ನಂತರ ತಂಡ ಯಾವ ಸ್ಥಿತಿಯಲ್ಲಿತ್ತು ಎಂದು ವಿವರಿಸಿದರು.
ನಾನು ಬ್ಯಾಟಿಂಗ್ ಮಾಡುವ ಕ್ರಮಾಂಕದಲ್ಲಿ ಒತ್ತಡ ಸಹಜ. ಅದು ಚೇಸ್ ಮಾಡುವ ಒತ್ತಡ. ನಾನು ಕೆಳಕ್ರಮಾಂಕದ ಆಟಗಾರರೊಂದಿಗೆ ಜೊತೆಯಾಟ ಆಡಬೇಕಾಗುತ್ತದೆ ಎಂದು ಧೋನಿ ಹೇಳಿದರು.
 

ವೆಬ್ದುನಿಯಾವನ್ನು ಓದಿ