310 ಏಕದಿನ ಪಂದ್ಯಗಳಿಂದ 9,891 ರನ್ ಗಳಿಸಿರುವ ಮಾಜಿನಾಯಕ, ಏಕದಿನ ಪಂದ್ಯಗಳಲ್ಲಿ 10,000 ರನ್ ಗಳಿಸಲು 109 ರನ್‌ಗಳು ಬೇಕಾಗಿವೆ. ಒಂದು ವೇಳೆ, ಇಂದಿನ ಭಾರತ-ಶ್ರೀಲಂಕಾ ಪಂದ್ಯದಲ್ಲಿ 109 ರನ್ ಗಳಿಸಿದರೆ ಏಕದಿನ ಪಂದ್ಯದಲ್ಲಿ 10,000 ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ, ಇದರೊಂದಿಗೆ ಏಕದಿನ ಪಂದ್ಯಗಳಲ್ಲಿ ವೇಗದ 10,000 ರನ್ ಗಳಿಸಿದ ಏಳನೇಯ ಆಟಗಾರರಾಗಲಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್, ಗಂಗೂಲಿ ಮತ್ತು ದ್ರಾವಿಡ್ ಅವರ ನಂತರ ಈ ಸಾಧನೆ ಮಾಡಿದ ಭಾರತದ ನಾಲ್ಕನೇಯ ಆಟಗಾರ ಹಾಗೂ ವಿಶ್ವದ ಹನ್ನೆರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಇನ್ನು ಇದೇ ಪಂದ್ಯದಲ್ಲಿ ಏಂಜಲೋ ಮ್ಯಾಥ್ಯೂಸ್ 63 ರನ್ ಗಳಿಸಿದರೆ, ಏಕದಿನ ಪಂದ್ಯಗಳಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ಶ್ರೀಲಂಕಾದ 10ನೇ ಆಟಗಾರರಾಗಲಿದ್ದಾರೆ. ಏಂಜಲೋ ಮ್ಯಾಥ್ಯೂಸ್ 194 ಪಂದ್ಯಗಳಿಂದ 4937 ರನ್‌ಗಳನ್ನು ಪೇರಿಸಿದ್ದಾರೆ.