ಪ್ರತಿಭೆಯಿದ್ದರೂ ಕೆಎಲ್ ರಾಹುಲ್ ಗೆ ಅವಕಾಶ ನೀಡದ್ದಕ್ಕೆ ಗಂಗೂಲಿ ಸಿಟ್ಟು
ಬುಧವಾರ, 13 ಡಿಸೆಂಬರ್ 2017 (08:33 IST)
ಮುಂಬೈ: ಪ್ರತಿಭಾವಂತ ಕೆಎಲ್ ರಾಹುಲ್ ಮತ್ತು ಅಜಿಂಕ್ಯಾ ರೆಹಾನೆಯನ್ನು ಪದೇ ಪದೇ ತಂಡದಿಂದ ಹೊರಗಿಡುತ್ತಿರುವ ಟೀಂ ಇಂಡಿಯಾ ಆಯ್ಕೆಗಾರರ ವಿರುದ್ಧ ಮಾಜಿ ನಾಯಕ ಸೌರವ್ ಗಂಗೂಲಿ ಸಿಟ್ಟಿಗೆದ್ದಿದ್ದಾರೆ.
ಇವರಿಬ್ಬರೂ ಪ್ರತಿಭಾವಂತರು. ಇಬ್ಬರಿಗೂ ಏಕದಿನ ತಂಡದಲ್ಲಿ ಹೆಚ್ಚಿನ ಅವಕಾಶ ನೀಡಬೇಕು. ಅದು ಬಿಟ್ಟು ಪದೇ ಪದೇ ಇಬ್ಬರನ್ನೂ ಹೊರಗಿಡುತ್ತಿರುವುದು ಸರಿಯಲ್ಲ. ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದರೂ ನಂ.3 ಅಥವಾ ನಾಲ್ಕನೇ ಸ್ಥಾನ ಖಾಲಿಯಿರುತ್ತದೆ. ಅಲ್ಲಿ ಈ ಆಟಗಾರರಿಗೆ ಅವಕಾಶ ನೀಢಬಹುದು ಎಂದು ಗಂಗೂಲಿ ಪ್ರತಿಪಾದಿಸಿದ್ದಾರೆ.
ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಇವರಿಬ್ಬರಿಗೂ ಹೆಚ್ಚಿನ ಅವಕಾಶ ನೀಡಬೇಕು. ಇವರಿಬ್ಬರೂ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬಲ್ಲ ಆಟಗಾರರು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ