ಧೋನಿ ರನ್ ಔಟ್‌ನಿಂದ ತಪ್ಪಿಸಿಕೊಳ್ಳಲು ಡೈವ್ ಮಾಡಲಿಲ್ಲ: ಆಸಿಸ್ ಮಾಧ್ಯಮಗಳ ಟೀಕೆ

ಶುಕ್ರವಾರ, 27 ಮಾರ್ಚ್ 2015 (12:54 IST)
ಭಾರತದ ಬ್ಯಾಟ್ಸ್‌ಮನ್‌ಗಳ ಹೋರಾಟದ ಮನೋಭಾವದ ಕೊರತೆಯನ್ನು ಕುರಿತು ಆಸ್ಟ್ರೇಲಿಯಾ ಮಾಧ್ಯಮ ಟೀಕೆಗಳ ಸುರಿಮಳೆ ಸುರಿಸಿದೆ.  ಆದರೆ  ಆಸಿಸ್  ತಂಡದ ಉತ್ತಮ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಹೊಳೆ ಹರಿಸಿದೆ. 
 
 329 ರನ್ ಗುರಿಯನ್ನು ಬೆನ್ನಟ್ಟಿದ ಭಾರತ 233 ರನ್‌ಗೆ ಆಲೌಟ್ ಆಗಿದ್ದು, ಧೋನಿ ಮತ್ತು ವಿರಾಟ್ ಕೊಹ್ಲಿ ಅಗತ್ಯವಿದ್ದ ಸಂದರ್ಭದಲ್ಲಿ ಟೀಂಗೆ ಸ್ಫೂರ್ತಿ ನೀಡುವಲ್ಲಿ ವಿಫಲರಾದರು ಎಂದು ಮಾಧ್ಯಮ ತಿಳಿಸಿದೆ.  ಭಾರತ ಆಸ್ಟ್ರೇಲಿಯಾದ ಗುರಿಯನ್ನು ಚೇಸ್ ಮಾಡುವ ಅವಕಾಶವಿದ್ದರೆ ಅದು ಧೋನಿ ಮತ್ತು ಕೊಹ್ಲಿಯಿಂದ ಮಾತ್ರ ಸಾಧ್ಯವಾಗುತ್ತದೆ. ಆದರೆ ಇಬ್ಬರೂ ಆ ದೂರವನ್ನು ಮುಟ್ಟಲು ಪ್ರಯತ್ನಿಸಲಿಲ್ಲ ಎಂದು ವರದಿ ತಿಳಿಸಿದೆ.

 ಧೋನಿ ಸ್ಕ್ರೀಸ್‌ನಲ್ಲಿದ್ದಾಗ ಭಾರತಕ್ಕೆ ಇನ್ನೂ ಆಶಾಭಾವನೆ ಉಳಿದಿತ್ತು. ಆದರೆ ಭಾರತ ತಂಡದ ನಾಯಕ ತಮ್ಮ ಪ್ರಯತ್ನವನ್ನು ಸುಲಭವಾಗಿ ಕೈಚೆಲ್ಲಿದರು ಎಂದು ಹೇಳಿವೆ.  ಮ್ಯಾಕ್ಸ್‌ವೆಲ್ ಅದ್ಭುತ ಎಸೆತವನ್ನು ವಿಕೆಟ್‌ಗೆ ಎಸೆದರು. ಆದರೆ ಧೋನಿ ಪಿಚ್ ಮಧ್ಯಭಾಗದಲ್ಲೇ ನಿರ್ಗಮಿಸುವ ನಿರ್ಧಾರ ಕೈಗೊಂಡಂತೆ ಕಾಣುತ್ತದೆ. ಅವರು ಸ್ಕ್ರೀಸ್ ಮುಟ್ಟಲು ಕೊನೆಯ ಪ್ರಯತ್ನವಾಗಿ ಡೈವ್ ಮಾಡಲಿಲ್ಲ.

ನೇರವಾಗಿ ಓಡಿಬಂದಿದ್ದರಿಂದ ಭಾರತದ ಕೊನೆಯ ಗೆಲುವಿನ ಆಸೆಯೂ ಕಮರಿಹೋಯಿತು ಎಂದು ವರದಿ ತಿಳಿಸಿದೆ.  ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಈ ಕುರಿತು ಧೋನಿ ತಮ್ಮ ಸ್ಕ್ರೀಸ್ ಮುಟ್ಟಲು ಬ್ಯಾಟನ್ನು ಕೂಡ ಜಾರಿಸಲಿಲ್ಲ ಎಂದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ವೆಬ್ದುನಿಯಾವನ್ನು ಓದಿ