ಅಭ್ಯಾಸ ತಪ್ಪಿಸಿಕೊಂಡ ಧೋನಿ!

ಶುಕ್ರವಾರ, 20 ಏಪ್ರಿಲ್ 2018 (07:18 IST)
ಪುಣೆ: ಹೊಸ ತವರಿನಲ್ಲಿ ಐಪಿಎಲ್ ನ ಮುಂದಿನ ಪಂದ್ಯಗಳನ್ನು ಆಡಲು ಸಜ್ಜಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಆರಂಭಿಸಿದೆ. ಆದರೆ ನಾಯಕ ಧೋನಿ ಮಿಸ್ಸಿಂಗ್ ಆಗಿದ್ದಾರೆ.

ತಂಡದ ಇತರ ಸದಸ್ಯರೊಂದಿಗೆ ನೆಟ್ ಪ್ರಾಕ್ಟೀಸ್ ಸೆಷನ್ ಗೆ ಧೋನಿ ಆಗಮಿಸಿಲ್ಲ. ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಧೋನಿ ಬೆನ್ನು ನೋವಿಗೆ ತುತ್ತಾಗಿದ್ದರು. ಅದೇ ಕಾರಣಕ್ಕೆ ಅವರು ಅಭ್ಯಾಸಕ್ಕೆ ಬರಲಿಲ್ಲ ಎಂಬ ಸುದ್ದಿಯಿದೆ.

ಆದರೆ ಸಿಎಸ್ ಕೆ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಮೂಲಗಳ ಪ್ರಕಾರ ಮುಂದಿನ ಪಂದ್ಯಕ್ಕೆ ಧೋನಿ ಕೇವಲ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯಬಹುದು. ಕೀಪಿಂಗ್ ಜವಾಬ್ದಾರಿಯನ್ನು ಹೊಸಬ ಜಗದೀಶನ್ ಅಥವಾ ಕೀಪಿಂಗ್ ನಲ್ಲೂ ಅನುಭವವಿರುವ ಅಂಬಟಿ ರಾಯುಡು ವಹಿಸಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ