ಅತ್ತ ವಿರಾಟ್ ಕೊಹ್ಲಿಗೂ ಸೋಲು, ಇತ್ತ ಧೋನಿಗೂ ಸೋಲು
ನವದೆಹಲಿ: ಟೀಂ ಇಂಡಿಯಾದ ಇಬ್ಬರು ಅತ್ಯಂತ ಶ್ರೇಷ್ಠ ನಾಯಕರಿಗೂ ನಿನ್ನೆ ಕರಾಳ ದಿನ. ವಿರಾಟ್ ಕೊಹ್ಲಿ ತಮ್ಮ ತಂಡದ ಜತೆಗೆ ಮೂರೇ ಗಂಟೆಯಲ್ಲಿ ಗಂಟು ಮೂಟೆ ಕಟ್ಟಿದ್ದರೆ, ಅತ್ತ ಧೋನಿಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೋಲೇ ಗತಿಯಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಕರ್ನಾಟಕ ಗೆಲುವಿಗೆ 267 ರನ್ ಗಳ ಗುರಿ ನಿಗದಿಪಡಿಸಿತ್ತು. ಇದನ್ನು ಬೆಂಬತ್ತಿದ್ದ ಧೋನಿ ನೇತೃತ್ವದ ಜಾರ್ಖಂಡ್ ತಂಡ ಕೇವಲ 262 ರನ್ ಗಳಿಸಲಷ್ಟೇ ಶಕ್ತವಾಯಿತು. ಧೋನಿ 50 ಎಸೆತಗಳಲ್ಲಿ 43 ರನ್ ಗಳಿಸಿದ್ದರು.