ಕೊಹ್ಲಿಗೆ ನಾಲ್ಕನೇ ಕ್ರಮಾಂಕ: ಸಿಟ್ಟಿಗೆದ್ದು ಧೋನಿ ಜತೆ ಜಗಳ?

ಮಂಗಳವಾರ, 13 ಅಕ್ಟೋಬರ್ 2015 (21:27 IST)
ಟೀಂ ಇಂಡಿಯಾದ ನಾಯಕ ಮತ್ತು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಡುವೆ ಕಾನ್ಪುರ ಪಂದ್ಯಕ್ಕೆ ಮುನ್ನ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಅಜಿಂಕ್ಯಾ ರಹಾನೆ ಅವರನ್ನು 11 ಮಂದಿಯ ತಂಡದಲ್ಲಿ ಸೇರಿಸಿಕೊಂಡಿದ್ದರಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಗಿ ಅವರು ಕೇವಲ 11 ರನ್ ಮಾತ್ರ ಬಾರಿಸುವುದರಲ್ಲಿ ಫಲಿತಾಂಶ ಸಿಕ್ಕಿತು.

ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದವರು ರಹಾನೆಯನ್ನು ಸೇರಿಸಿಕೊಂಡು ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು 4ಕ್ಕೆ ಇಳಿಸಿದ್ದು ರುಚಿಸಲಿಲ್ಲ. ಆಗ ಕೊಹ್ಲಿ ಧೋನಿ ಜತೆ ಮಾತಿನ ಚಕಮಕಿಯಲ್ಲಿ ತೊಡಗಿದರು.ಆದರೆ ಇದನ್ನು ಧೋನಿ ಇವೆಲ್ಲಾ ವದಂತಿ ಎಂದಷ್ಟೇ ಹೇಳಿ ಸುಮ್ಮನಾದರು.  

ಅಜಿಂಕ್ಯಾ ರಹಾನೆಗೆ ಮುಂಚಿನ ಪಂದ್ಯಗಳಲ್ಲಿ ಅವಕಾಶ ನೀಡದಿದ್ದರಿಂದ ಟೀಕೆಗೆ ಗುರಿಯಾಗಿದ್ದ ಧೋನಿ ರಹಾನೆ ಅಗ್ರ ಮೂರು ಕ್ರಮಾಂಕಗಳಲ್ಲಿ ಮಾತ್ರ ಫಿಟ್ ಆಗುವುದರಿಂದ ಅವರು ಆಡದೇ ಇರಬಹುದು ಎಂದು ಹೇಳಿದ್ದರು. ಆದರೆ ಕೊನೆಗೆ ರಹಾನೆಯನ್ನು ಮೂರನೇ ಕ್ರಮಾಂಕದಲ್ಲಿ ಇಳಿಸಿ, ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕಕ್ಕೆ ದೂಡಿದ್ದು ಕೊಹ್ಲಿಗೆ ಸಿಟ್ಟು ತರಿಸಿತ್ತು. 
 

ವೆಬ್ದುನಿಯಾವನ್ನು ಓದಿ