ಬಿಸಿಸಿಐಗೆ ಚೀನಾ ಕಂಪನಿಗಳ ಪ್ರಾಯೋಜಕತ್ವ ಮುರಿಯುವುದೂ ಕಷ್ಟ
ಒಂದು ವೇಳೆ ಈ ಒಪ್ಪಂದಗಳನ್ನು ಮುರಿದರೆ ಭಾರತೀಯ ಕ್ರಿಕೆಟ್ ಸಂಸ್ಥೆಗೆ ಭಾರೀ ನಷ್ಟವಾಗಲಿದೆ. ಈಗಾಗಲೇ ಆರ್ಥಿಕ ಹೊಡೆತದಲ್ಲಿರುವ ಕ್ರಿಕೆಟ್ ಸಂಸ್ಥೆ ಒಂದೇ ಸಮಯಕ್ಕೆ ಎಲ್ಲಾ ಒಪ್ಪಂದಗಳನ್ನು ಕಡಿತಗೊಳಿಸುವುದು ಕಷ್ಟ. ಹೀಗಾಗಿ ಇದು ಬಿಸಿಸಿಐಗೆ ದೊಡ್ಡ ತಲೆನೋವಾಗಲಿದೆ.