ದಿಲ್ರುವಾನ್ ಪೆರೇರಾ 5 ವಿಕೆಟ್: ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯಾ

ಶನಿವಾರ, 6 ಆಗಸ್ಟ್ 2016 (13:05 IST)
ಗಾಲೆ: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಗಾಲೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌‌ನಲ್ಲಿ ದಿಲ್ರುವಾನ್ ಪೆರೇರಾ ಅವರ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 133ಕ್ಕೆ 7 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದೆ. ಇದಕ್ಕೆ ಮುಂಚೆ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ರಂಗನಾ ಹೆರಾತ್ ಅವರ ಹ್ಯಾಟ್ರಿಕ್ ನೆರವಿನಿಂದ 106 ರನ್‌ಗಳಿಗೆ ಆಲೌಟ್ ಆಗಿತ್ತು.

ಡೇವಿಡ್ ವಾರ್ನರ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಶ್ರೀಲಂಕಾ ಸ್ಪಿನ್ ಬೌಲಿಂಗ್ ಆಡಲು ತಿಣುಕಾಡಿ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಇದರಿಂದಾಗಿ ಆಸ್ಟ್ರೇಲಿಯಾ ಸ್ಪಿನ್ ಆಡುವುದಕ್ಕೆ ತನ್ನ ದೌರ್ಬಲ್ಯವನ್ನು ಸಾಬೀತು ಮಾಡಿದೆ. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 281 ರನ್ ಸ್ಕೋರ್ ಮಾಡಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 237 ರನ್‌ಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾಕ್ಕೆ ಕೇವಲ 3 ವಿಕೆಟ್ ಮಾತ್ರ ಉಳಿದ್ದು, ಸೋಲಿನ ಅಂಚಿನಲ್ಲಿದೆ. 
 
ಶ್ರೀಲಂಕಾ ಮೊದಲ ಇನ್ನಿಂಗ್ಸ್ 281ಕ್ಕೆ ಆಲೌಟ್ 
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 106ಕ್ಕೆ ಆಲೌಟ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 237ಕ್ಕೆ ಆಲೌಟ್
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 170ಕ್ಕೆ 8 ವಿಕೆಟ್ 
ಡೇವಿಡ್ ವಾರ್ನರ್ 41, ಸ್ಟೀವನ್ ಸ್ಮಿತ್ 30, ವೋಗ್ಸ್ 28, ಸ್ಟಾರ್ಕ್ 26
ವಿಕೆಟ್ ಪತನ
3-1 (ಜೋ ಬರ್ನ್ಸ್, 0.6), 10-2 (ನಥಾನ್ ಲಿನ್, 3.3), 10-3 (ಉಸ್ಮಾನ್ ಖ್ವಾಜಾ, 3.4), 61-4 (ಡೇವಿಡ್ ವಾರ್ನರ್, 11.2), 80-5 (ಸ್ಟೀವನ್ ಸ್ಮಿತ್, 19.6), 119-6 (ಮಿಚೆಲ್ ಮಾರ್ಷ್, 32.5), 123-7 (ಆಡಮ್ ವೋಗ್ಸ್, 35.6), 164-8 (ಮಿಚೆಲ್ ಸ್ಟಾರ್ಕ್, 44.3)
 ಬೌಲಿಂಗ್ ವಿವರ
ರಂಗನಾ ಹೆರಾತ್ 2 ವಿಕೆಟ್, ದಿಲ್ರುವಾನ್ ಪೆರೇರಾ 5 ವಿಕೆಟ್, ಲಕ್ಷನ್ ಸಂದಾಕನ್ 1 ವಿಕೆಟ್ 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ