ಧೋನಿ ಜತೆ ಪೈಪೋಟಿ ಶುರುವಾಗಿದೆಯೇ ಎಂದಿದ್ದಕ್ಕೆ ದಿನೇಶ್ ಕಾರ್ತಿಕ್ ಹೇಳಿದ್ದೇನು ಗೊತ್ತಾ?!
ಬುಧವಾರ, 21 ಮಾರ್ಚ್ 2018 (09:20 IST)
ಮುಂಬೈ: ಒಂದೇ ಒಂದು ಪಂದ್ಯದಿಂದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಭವಿಷ್ಯವೇ ಬದಲಾಗಿದೆ. ಇದಕ್ಕಿಂತ ಮೊದಲು ತಂಡಕ್ಕೆ ಆಯ್ಕೆಯಾಗುವುದೇ ಕಷ್ಟವಾಗಿದ್ದ ಕಾರ್ತಿಕ್ ಇದೀಗ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಸೀಮಿತ ಓವರ್ ಗಳ ಖಾಯಂ ವಿಕೆಟ್ ಕೀಪರ್ ಧೋನಿಗೇ ಸವಾಲೊಡ್ಡುವ ಮಟ್ಟಿಗೆ ಬೆಳೆದಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಟಿ20 ಫೈನಲ್ ಪಂದ್ಯದಲ್ಲಿ ಹೊಡೆದ ಅಂತಿಮ ಬಾಲ್ ನ ಸಿಕ್ಸರ್ ಕಾರ್ತಿಕ್ ವೃತ್ತಿ ಜೀವನಕ್ಕೇ ತಿರುವು ನೀಡಿದೆ. ಈಗ ಸೀಮಿತ ಓವರ್ ಗಳಲ್ಲಿ ಧೋನಿಗೇ ಕಾರ್ತಿಕ್ ಪೈಪೋಟಿ ಒಡ್ಡಲಿದ್ದಾರೆ.
ಈ ಬಗ್ಗೆ ಕಾರ್ತಿಕ್ ಗೆ ಪ್ರಶ್ನಿಸಿದಾಗ ‘ಒಂದು ಯೂನಿವರ್ಸಿಟಿಯಲ್ಲಿ ನಾನು ಕೇವಲ ಸಾಮಾನ್ಯ ವಿದ್ಯಾರ್ಥಿ, ಆದರೆ ಧೋನಿ ಅಲ್ಲಿ ಟಾಪರ್. ನಮ್ಮ ನಡುವೆ ಹೋಲಿಕೆ ಮಾಡುವುದು ಯಾವುದೇ ಕಾರಣಕಕ್ಕೂ ಸೂಕ್ತವಲ್ಲ. ನನಗೆ ಅವರೇ ಸ್ಪೂರ್ತಿ’ ಎಂದಿದ್ದಾರೆ. ವಿಶೇಷವೆಂದರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಮೂರು ವರ್ಷ ಮೊದಲೇ ಅಂದರೆ 2004 ರಲ್ಲಿಯೇ ಕಾರ್ತಿಕ್ ವೃತ್ತಿ ಬದುಕು ಆರಂಭವಾಗಿತ್ತು. ಆದರೆ ಹೆಚ್ಚು ಪಂದ್ಯವಾಡಿದ್ದು, ದಾಖಲೆ ಮಾಡಿದ್ದು ಧೋನಿ. ಇಷ್ಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಾರ್ತಿಕ್ ಗೆ ಬ್ರೇಕ್ ಸಿಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ