ರಿಯೊ ಕ್ರೀಡಾಕೂಟದ ಟೆಸ್ಟ್ ಈವೆಂಟ್‌ನಲ್ಲಿ ಚಿನ್ನ ಗೆದ್ದ ದೀಪಾ ಕರ್ಮಾಕರ್

ಮಂಗಳವಾರ, 19 ಏಪ್ರಿಲ್ 2016 (11:19 IST)
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪ್ರಥಮ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮಂಗಳವಾರ ರಿಯೋ ಗೇಮ್ಸ್ ಟೆಸ್ಟ್ ಈವೆಂಟ್‌ನ ವಾಲ್ಟ್ಸ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 22 ವರ್ಷದ ದೀಪಾ ಮಹಿಳಾ ವಾಲ್ಟ್ಸ್ ಫೈನಲ್ಸ್‌ನಲ್ಲಿ 14.833 ಪಾಯಿಂಟ್ ಸ್ಕೋರ್ ಮಾಡಿ ಮೊದಲ ಸ್ಥಾನ ಗಳಿಸುವ ಮೂಲಕ ಜಾಗತಿಕ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದ ಅಪರೂಪದ ಸಾಧನೆಯನ್ನು ಮಾಡಿದರು. 
 
ಭಾರತೀಯ ಮಹಿಳೆ ಜಾಗತಿಕ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಮೊದಲ ಬಾರಿ ಚಿನ್ನವನ್ನು ಗೆದ್ದ ಸಾಧನೆಯನ್ನು ದೀಪಾ ಮಾಡಿದ್ದಾರೆ. ತ್ರಿಪುರಾದ ಯುವತಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 52.698 ಪಾಯಿಂಟ್ ಒಟ್ಟು ಸ್ಕೋರ್ ಗಳಿಸಿ ರಿಯೋ ಕ್ರೀಡಾಕೂಟದಲ್ಲಿ ಆರ್ಟಿಸ್ಟಿಕ್ಸ್ ಜಿಮ್ನಾಸ್ಟಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು.
 
 ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 11 ಪುರುಷ ಜಿಮ್ನಾಸ್ಟ್ ಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಆದರೆ  ಮಹಿಳೆ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ವೆಬ್ದುನಿಯಾವನ್ನು ಓದಿ