ಯುವರಾಜ್ ಸಿಂಗ್ ಕೈಯಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿಸಿಕೊಂಡಿದ್ದ ವೇಗಿ ಸ್ಟುವರ್ಟ್ ವೇಗಿ ಕ್ರಿಕೆಟ್ ಗೆ ವಿದಾಯ

ಭಾನುವಾರ, 30 ಜುಲೈ 2023 (09:00 IST)
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಆಷಸ್ ಟೆಸ್ಟ್ ಸರಣಿ ಅವರ ಕೊನೆಯ ಪಂದ್ಯವಾಗಿತ್ತು. ಕೊನೆಯ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಸ್ಟುವರ್ಟ್ ಬ್ರಾಡ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. 37 ವರ್ಷದ ಬ್ರಾಡ್ ಈ ಹಿಂದೆ ಟಿ20 ವಿಶ್ವಕಪ್ ನಲ್ಲಿ ಭಾರತದ ಯುವರಾಜ್ ಸಿಂಗ್ ಕೈಯಲ್ಲಿ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಚಚ್ಚಿಸಿಕೊಂಡಿದ್ದು ಕ್ರಿಕೆಟ್ ಪ್ರಿಯರಿಗೆ ಮರೆಯಲಾಗದು.

ಇಂಗ್ಲೆಂಡ್ ಪರ ಒಟ್ಟು 167 ಟೆಸ್ಟ್ ಪಂದ್ಯವಾಡಿರುವ ಬ್ರಾಡ್ 602 ವಿಕೆಟ್ ಕಬಳಿಸಿದ್ದಾರೆ. 121 ಏಕದಿನ ಪಂದ್ಯಗಳಿಂದ 178 ವಿಕೆಟ್ ಮತ್ತು 56 ಟಿ20 ಪಂದ್ಯಗಳಿಂದ 65 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ಶತಕ ಕೂಡಾ ಸಿಡಿಸಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದರೂ ಇಷ್ಟು ಸುದೀರ್ಘ ಕಾಲ ವೇಗಿಯಾಗಿ ಯಶಸ್ವೀ ವೃತ್ತಿ ಜೀವನ ಮುಗಿಸಿದ ಹೆಮ್ಮೆ ಅವರದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ