ವಿರಾಟ್ ಕೊಹ್ಲಿ ಹಾಕಿಕೊಳ್ಳುವ ಇಯರ್ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ

ಶನಿವಾರ, 29 ಜುಲೈ 2023 (08:40 IST)
ಮುಂಬೈ: ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಾರೆ.

ವಿರಾಟ್ ಕೊಹ್ಲಿ ಸಂಗೀತ ಪ್ರಿಯ. ಎಲ್ಲೇ ಪ್ರಯಾಣ ಮಾಡುವಾಗಲೂ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಮ್ಯೂಸಿಕ್ ಕೇಳುತ್ತಾ ಪ್ರಯಾಣವನ್ನು ಎಂಜಾಯ್ ಮಾಡುತ್ತಾರೆ. ಅವರ ಬಳಿ ಹಲವು ಹಾಡುಗಳ ಕಲೆಕ್ಷನ್ ಇದೆ ಎಂದು ತಂಡದ ಸಹಆಟಗಾರರೇ ಹೇಳುತ್ತಾರೆ.

ಹೀಗಿರುವಾಗ ಕೊಹ್ಲಿ ಹಾಕಿಕೊಳ್ಳುವ ಇಯರ್ ಫೋನ್ ಬೆಲೆಯೆಷ್ಟು ಗೊತ್ತಾ? ಕೊಹ್ಲಿ ಬಳಸುವುದು ಆಪಲ್  ಏರ್ ಪೋಡ್ಸ್ ಪ್ರೊ ಇಯರ್ ಫೋನ್. ಈ ಇಯರ್ ಫೋನ್ ಬೆಲೆ ಬರೋಬ್ಬರಿ 20 ಸಾವಿರ ರೂ.ಗಳು. ಇದು ಭಾರತದಲ್ಲಂತೂ ಸಿಗುವುದಿಲ್ಲ. ಭಾರತದಲ್ಲಿ ಕೆಲವು ಶ್ರೀಮಂತ ಸೆಲೆಬ್ರಿಟಿಗಳು ಮಾತ್ರ ಈ ಇಯರ್ ಫೋನ್ ಬಳಸುತ್ತಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ