ಪಾಕಿಸ್ತಾನದ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದಲ್ಲಿ 14 ಆಟಗಾರರ ವಿಸ್ತರಿತ ತಂಡದಲ್ಲಿ ಪೇಸ್ ಬೌಲರ್ ಜೇಮ್ಸ್ ಆ್ಯಂಡರ್‌ಸನ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಲೆಗ್ ಸ್ಪಿನ್ನರ್ ಅಡಿಲ್ ರಷೀದ್ ಅವರನ್ನು ಇಂಗ್ಲೆಂಡ್ ಸೇರ್ಪಡೆ ಮಾಡಿದೆ.
ಏತನ್ಮಧ್ಯೆ ರಷೀದ್ ಸ್ವದೇಶದಲ್ಲಿ ಇನ್ನೂ ಟೆಸ್ಟ್ ಆಡಬೇಕಿದ್ದು, ಅವರನ್ನು ಬ್ಯಾಕ್ ಅಪ್ ಆಗಿ ಅಥವಾ ಮೊಯಿನ್ ಅಲಿಗೆ ಬದಲಿಯಾಗಿ ನೇಮಕ ಮಾಡುವ ಸಾಧ್ಯತೆಯಿದೆ. ಆಫ್ ಬ್ರೇಕ್ ಬೌಲರ್ ಮೊಯಿನ್ ಅಲಿಯನ್ನು ಲಾರ್ಡ್ಸ್‌ನಲ್ಲಿ ಪಾಕ್ ಬ್ಯಾಟ್ಸ್‌ಮನ್ ಕಠಿಣವಾಗಿ ದಂಡಿಸಿದ್ದರು.
ಆಂಡರ್‌ಸನ್ ಮತ್ತು ಸ್ಟೋಕ್ಸ್ ಇಬ್ಬರೂ ಲಂಕಾಶೈರ್ ಮತ್ತು ಡರ್ಹಾಮ್ ನಡುವೆ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದರು. ನಾಟಿಂಗ್‌ಹ್ಯಾಮ್ ಶೈರ್ ವೇಗಿ ಜೇಕ್ ಬಾಲ್ ಲಾರ್ಡ್ಸ್‌ನಲ್ಲಿ ಟೆಸ್ಟ್‌ಗೆ ಚೊಚ್ಚಲ ಪ್ರವೇಶ ಮಾಡಿದ್ದು, ಎಡ ತೊಡೆಯಲ್ಲಿ ಸ್ನಾಯುಬಿಗಿತದಿಂದ ಇಂಗ್ಲೆಂಡ್ ವೈದ್ಯ ತಂಡ ತಪಾಸಣೆ ನಡೆಸುತ್ತಿದೆ.