ಇಂಗ್ಲೆಂಡ್ ನ್ಯೂಜಿಲೆಂಡ್ ತಂಡದ ವಿರುದ್ಧ ಲಾರ್ಡ್ಸ್ನಲ್ಲಿ ನಡೆದ ಪ್ರಥಮ ಟೆಸ್ಟ್ನಲ್ಲಿ 124 ರನ್ ಅಚ್ಚರಿಯ ಗೆಲುವನ್ನು ಸೋಮವಾರ ಸಾಧಿಸಿದೆ. ಐದನೇ ಮತ್ತು ಅಂತಿಮ ದಿನ 345 ರನ್ ಅಗತ್ಯವಿದ್ದ ನ್ಯೂಜಿಲೆಂಡ್ ಕೇವಲ 220 ರನ್ಗೆ ಆಲೌಟ್ ಆಗಿದ್ದರಿಂದ ಇಂಗ್ಲೆಂಡ್ ಉಭಯ ರಾಷ್ಟ್ರಗಳ ನಡುವೆ ನೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲಿಗೆ 12 ರನ್ಗೆ 3 ವಿಕೆಟ್ ಕಳೆದುಕೊಂಡು ಕುಸಿತ ಅನುಭವಿಸಿದ್ದ ನ್ಯೂಜಿಲೆಂಡ್ ಬೆನ್ ಸ್ಟೋಕ್ಸ್ ಅವರ ಬೌಲಿಂಗ್ ದಾಳಿಗೆ ಸಿಲುಕಿ 61ರನ್ಗೆ 5 ವಿಕೆಟ್ ಕಳೆದುಕೊಂಡಿತು. ಆದರೆ ವಾಟ್ಲಿಂಗ್ ಅವರ 59 ರನ್ ಮತ್ತು ಆಂಡರ್ಸನ್ ಅವರ 75 ರನ್ ಮೂಲಕ 107 ರನ್ ಜೊತೆಯಾಟವು ಇಂಗ್ಲೆಂಡ್ ತಂಡವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿತು. ಆದಾಗ್ಯೂ ಇಬ್ಬರೂ ಬ್ಯಾಟ್ಸ್ಮನ್ಗಳು ಔಟಾದ ಬಳಿಕ ನ್ಯೂಜಿಲೆಂಡ್ 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತ್ತು.