ಪ್ರವಾಸಿ ಪಾಕ್ ವಿರುದ್ಧ ತ್ರಿವಳಿ ಸ್ಪಿನ್ ದಾಳಿ: ಮಾರ್ಗನ್ ಪರಿಶೀಲನೆ

ಬುಧವಾರ, 24 ಆಗಸ್ಟ್ 2016 (16:14 IST)
ಇಂಗ್ಲೆಂಡ್ ಸೀಮಿತ ಓವರುಗಳ ನಾಯಕ ಇಯಾನ್ ಮಾರ್ಗನ್ ಪಾಕಿಸ್ತಾನದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂವರು ಸ್ಪಿನ್ನರುಗಳನ್ನು ಆಡಿಸುವ ಅಸಾಧಾರಣ ಆಯ್ಕೆ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಇಂಗಿತ ನೀಡಿದ್ದಾರೆ. ಇಂಗ್ಲೆಂಡ್ ಇತ್ತೀಚಿನ ದಿನಗಳಲ್ಲಿ ಏಕಮಾತ್ರ ತಜ್ಞ ನಿಧಾನಬೌಲರನ್ನು ಆಡಿಸುವಲ್ಲಿ ತೃಪ್ತಿಯಿಂದಿತ್ತು. ಆದರೆ ಸ್ಪಿನ್ ಸ್ನೇಹಿ ಪಿಚ್‌ಗಳ ಸಿದ್ಧತೆಗೆ ಬೇಡಿಕೆಯಿಂದ ತಮ್ಮ ನಿಲುವನ್ನು ಬದಲಿಸಲು ಇಂಗ್ಲೆಂಡ್‌‍ಗೆ ಪ್ರೇರೇಪಿಸಿದೆ.
 
ಈ ಕುರಿತು ಪ್ರತಿಕ್ರಿಯಿಸಿದ ಮಾರ್ಗನ್,  ಆಫ್ ಸ್ಪಿನ್ನರ್ ಮೊಯಿನ್ ಅಲಿ ಮತ್ತು ಲೆಗ್ ಬ್ರೇಕ್ ಬೌಲರ್ ಅದಿಲ್ ರಷೀದ್ ಜತೆ ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್ ಅವರಿಗೆ ಏಕದಿನ ಚೊಚ್ಚಲ ಪ್ರವೇಶಕ್ಕೆ ಅವಕಾಶ ನೀಡುವ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ  ತಿಳಿಸಿದರು.
 
ಪಾಕಿಸ್ತಾನದ ವಿರುದ್ಧ ಸರಣಿ ಕಠಿಣವಾಗಿರುತ್ತದೆಂದು ಒಪ್ಪಿಕೊಂಡ ಅವರು ಚಳಿಗಾಲದ ಪ್ರವಾಸಕ್ಕೆ ಮುನ್ನ, ತಮ್ಮ ತಂಡ ಮುಂಬರುವ ಸವಾಲಿಗೆ ಪೂರ್ಣ ಸಜ್ಜಾಗಿದೆಯೆಂದು ಹೇಳಿದರು.
 
ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಫಾರಂ ಇಲ್ಲದೇ ತಿಣುಕಾಡಿದ ಅಲೆಕ್ಸ್ ಹೇಲ್ಸ್ ಅವರಿಗೆ ಮಾರ್ಗನ್ ಬೆಂಬಲವಾಗಿ ನಿಂತರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರುಗಳ ಪಂದ್ಯಗಳಲ್ಲಿ ಹೇಲ್ಸ್ ಚೆನ್ನಾಗಿ ಆಡಿದ್ದಾರೆಂದು ಮಾರ್ಗನ್ ಅಭಿಪ್ರಾಯಪಟ್ಟರು. ಬಿಳಿಯ ಚೆಂಡಿನ ಕ್ರಿಕೆಟ್‌ನಲ್ಲಿ ಪೂರ್ಣ ಸ್ವಾತಂತ್ರ್ಯದೊಂದಿಗೆ ಆಡುವಂತೆ ಮಾರ್ಗನ್ ಹೇಲ್ಸ್‌ಗೆ ಕರೆ ನೀಡಿದರು. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ