ಟೆಸ್ಟ್ ಸರಣಿಯಲ್ಲಿ ಭಾರತದ ಪಿಚ್‌ಗಳು ಅತ್ಯಂತ ಕಠಿಣ

ಮಂಗಳವಾರ, 1 ಡಿಸೆಂಬರ್ 2015 (18:07 IST)
ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ತಾವು ಎದುರಿಸುತ್ತಿರುವ ಭಾರತದ ಮೈದಾನಗಳು ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ಕಠಿಣ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಪ್ರವಾಸಿ ತಂಡದ ಹಿರಿಯ ಆಟಗಾರರು ಕಿರಿಯ ಆಟಗಾರರಿಗೆ ಬೆಂಬಲಿಸಿ ಅವರನ್ನು ಚೆನ್ನಾಗಿ ಆಡುವಂತೆ ಪ್ರೇರೇಪಿಸಬೇಕು ಎಂದು ಪ್ಲೆಸಿಸ್ ಹೇಳಿದರು.
 
ಟೆಸ್ಟ್ ಸರಣಿಯಲ್ಲಿ ಭಾರತದ ಪಿಚ್ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯ ಬಗ್ಗೆ  ಕೆಲವು ಕಿರಿಯ ಆಟಗಾರರು ಟೀಕೆಗೆ ಒಳಗಾಗಿದ್ದರು.  ಹಶೀಮ್ ಹಮ್ಲಾ ಹೇಳಿಕೆ ನೀಡಿದ ರೀತಿಯಲ್ಲಿ ಡು ಪ್ಲೆಸಿಸ್ ಕೂಡ ತಾವು ಎದುರಿಸಿದ ಅತ್ಯಂತ ಕಠಿಣ ಪಿಚ್‌ಗಳು ಎಂದು ಅಭಿಪ್ರಾಯಪಟ್ಟಿದ್ದು, ಅವರ ಸಾಧನೆಗಳನ್ನು ಅಳೆಯಲು ಇದನ್ನು ಮಾನದಂಡವಾಗಿ ಬಳಸುವುದರ ವಿರುದ್ಧ ಎಚ್ಚರಿಸಿದರು.
 
 ಇಂತಹ ಪಿಚ್ ಸ್ಥಿತಿಯಲ್ಲಿ ಕಿರಿಯ ಆಟಗಾರರಿಗೆ ಕಠಿಣವಾಗುತ್ತಾದ್ದರಿಂದ ಇವುಗಳ ಆಧಾರದ ಮೇಲೆ ಅವರ ಆಟವನ್ನು ಅಳೆಯುವುದು ಕಷ್ಟ. ನಮ್ಮ ಅನುಭವಿ ಆಟಗಾರರು  ಕೂಡ ಇದನ್ನು ಕಠಿಣವೆಂದು  ಕಂಡಿದ್ದಾರೆ.  ನಾವು ಕಿರಿಯ ಆಟಗಾರರಿಗೆ ಪ್ರೇರೇಪಣೆ ನೀಡುತ್ತಾ ಅವರ ನೈತಿಕ ಸ್ಥೈರ್ಯ ಹೆಚ್ಚಿಸಬೇಕು ಎಂದು ಪ್ಲೆಸಿಸ್ ಅಭಿಪ್ರಾಯಪಟ್ಟರು. 

ವೆಬ್ದುನಿಯಾವನ್ನು ಓದಿ