ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾದಿಂದ ಕೈಬಿಡಲಿರುವ ಸುದ್ದಿಗೆ ಫ್ಯಾನ್ಸ್ ಗರಂ

ಗುರುವಾರ, 28 ಏಪ್ರಿಲ್ 2022 (09:10 IST)
ಮುಂಬೈ: ಐಪಿಎಲ್ ನಲ್ಲೂ ಕಳಪೆ ಫಾರ್ಮ್ ಮುಂದುವರಿಸಿರುವ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದಲ್ಲೂ ಸ್ಥಾನ ನೀಡದಿರಲು ಬಿಸಿಸಿಐ ಚಿಂತನೆ ನಡೆಸಿದೆ ಎಂಬ ವರದಿಯಾದ ಬೆನ್ನಲ್ಲೇ ಫ್ಯಾನ್ಸ್ ಗರಂ ಆಗಿದ್ದಾರೆ.

ರನ್ ಮೆಷಿನ್ ಎನಿಸಿಕೊಂಡಿದ್ದ ಕೊಹ್ಲಿ ಕಳೆದ 102 ಪಂದ್ಯಗಳಿಂದ ಒಂದೇ ಒಂದು ಶತಕ ಸಿಡಿಸಿಲ್ಲ. ಹೀಗಾಗಿ ಮುಂಬರುವ ಟೀಂ ಇಂಡಿಯಾ ಸರಣಿಗೆ ಅವರನ್ನು ತಂಡದಿಂದ ಕೈಬಿಡಲು ಚಿಂತನೆ ನಡೆದಿದೆ ಎಂದು ಸುದ್ದಿಯಾಗಿತ್ತು.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕೊಹ್ಲಿ ಫ್ಯಾನ್ಸ್, ನಿಮಗೆ ಸ್ವಲ್ಪವೂ ಕೃತಜ್ಞತೆ ಎನ್ನುವುದು ಇಲ್ಲವೇ? ಹಾಗಿದ್ದರೆ ರೋಹಿತ್ ಶರ್ಮಾ ಕೂಡಾ ತಂಡದಲ್ಲಿರಲು ಲಾಯಕ್ಕಲ್ಲ ಎಂದು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ