ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಕೆಕೆಆರ್ ನಡುವೆ ಇಂದಿನ ಪಂದ್ಯ

ಗುರುವಾರ, 28 ಏಪ್ರಿಲ್ 2022 (08:10 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ ಮತ್ತು ಕೆಕೆಆರ್ ನಡುವೆ ಇಂದಿನ ಪಂದ್ಯ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಒಟ್ಟು ಏಳು ಪಂದ್ಯಗಳಿಂದ ಕೇವಲ 3 ಗೆಲುವು ಕಂಡಿರುವ ಡೆಲ್ಲಿಗೆ ಈಗ ಗೆದ್ದು ಅಂಕಪಟ್ಟಿಯಲ್ಲಿ ಸ್ಥಾನ ಸುಧಾರಿಸಿಕೊಳ್ಳುವ ತವಕ.

ಇತ್ತ ಕೆಕೆಆರ್ ಗೆ ಯಾಕೋ ಆರಂಭದ ಅದೃಷ್ಟ ಮತ್ತೆ ಕೈ ಹಿಡಿಯಲೇ ಇಲ್ಲ. ಆರಂಭದಲ್ಲಿ ಅಬ್ಬರಿಸುತ್ತಿದ್ದ ಕೆಕೆಆರ್ ಈಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ಕಾದುನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ