ಮುರಳಿ ವಿಜಯ್ ಅಜೇಯ 146, ಭಾರತ 422ಕ್ಕೆ 3 ವಿಕೆಟ್

ಶುಕ್ರವಾರ, 12 ಜೂನ್ 2015 (13:31 IST)
ಎರಡನೇ ದಿನ ಮಳೆಯಿಂದ ಅಡ್ಡಿಯಾದ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 239ಕ್ಕೆ ನೋಲಾಸ್‌ನಿಂದ ಶುಕ್ರವಾರ ಲಂಚ್ ವೇಳೆಗೆ ಸ್ಕೋರನ್ನು 3 ವಿಕೆಟ್ ಕಳೆದುಕೊಂಡು 422ರನ್ ಗಳಿಸಿದೆ. ಶಿಖರ್ ಧವನ್ ಜತೆ ಆರಂಭದ 283 ರನ್ ಜೊತೆಯಾಟವಾಡಿದ್ದ ಮುರಳಿ ವಿಜಯ್ ಅಜೇಯ 150 ರನ್ ಗಳಿಸಿದ್ದಾರೆ. 
ಶಕೀಬ್ ಅಲ್ ಹಸನ್ ಧವನ್(173) ಮತ್ತು ರೋಹಿತ್ ಶರ್ಮಾ(6) ಅವರನ್ನು ಔಟ್ ಮಾಡಿದ ಬಳಿಕ ವಿರಾಟ್ ಕೊಹ್ಲಿ 12 ರನ್ ಗಳಿಸಿದ್ದಾಗ ಜುಬೇರ್ ಹುಸೇನ್‌ಗೆ ಔಟಾದರು.

ಶಿಖರ್ ಧವನ್ ಅಬ್ಬರದ ಆಟವಾಡಿ 195 ಎಸೆತಗಳಲ್ಲಿ 173 ರನ್ ಸ್ಕೋರ್ ಮಾಡಿದರು. ಅವರ ಸ್ಕೋರಿನಲ್ಲಿ 23 ಬೌಂಡರಿಗಳಿದ್ದವು.  ಇದರಿಂದಾಗಿ ಭಾರತ 283ಕ್ಕೆ ನೋಲಾಸ್ ಇದ್ದದ್ದು ಮೂರು ವಿಕೆಟ್ ಕಳೆದುಕೊಂಡು 422 ರನ್‌ ಸ್ಕೋರ್ ಮಾಡಿದೆ.

74 ರನ್ ಗಳಿಸಿ ನಾಟೌಟ್ ಆಗಿರುವ ಅಜಿಂಕ್ಯಾ ರಹಾನೆ ವಿಜಯ್ ಜೊತೆ ಮುರಿಯದ ನಾಲ್ಕನೇ ವಿಕೆಟ್‌‍ಗೆ ಉತ್ತಮ ಮೊತ್ತ ಕಲೆಹಾಕುವ ನಿರೀಕ್ಷೆ ಮೂಡಿಸಿದ್ದಾರೆ.  ಮೊದಲ ದಿನವೇ ಮಳೆಯಿಂದಾಗಿ 90 ಓವರುಗಳಲ್ಲಿ 56 ಓವರ್ ಮಾತ್ರ ಮಾಡಲು ಸಾಧ್ಯವಾಗಿತ್ತು.  ಎರಡನೇ ದಿನ ಮಳೆರಾಯನ ಕಾಟದಿಂದ ಇಡೀ ದಿನದ ಆಟವು ವಾಶ್ಔಟ್ ಆಗಿತ್ತು. ಮೂರನೇ ದಿನವೂ ಲಂಚ್ ಬಿದ್ದಿತ್ತು.
 

ವೆಬ್ದುನಿಯಾವನ್ನು ಓದಿ